ಹುಣಸೂರು: ಮೈಮುಲ್‌ಗೆ ಸರಬರಾಜು ಆಗುವ ಹಾಲಿನ ಪೈಕಿ ಹುಣಸೂರು ತಾಲೂಕಿನಿಂದ ಸರಬರಾಜಾಗುವ ಹಾಲು ಉತ್ತಮ ಗುಣಮಟ್ಟ ಹಾಗೂ ಒಳ್ಳೆಯ ಜಿಡ್ಡಿನಾಂಶದಿಂದ ಕೂಡಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು. ತಾಲೂಕಿನ ಹನಗೋಡು ಹೋಬಳಿಯ ಹೆಬ್ಟಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ಒಕ್ಕೂಟಕ್ಕೆ 9 ಲಕ್ಷ ಲೀ. ಹಾಲು ಸರಬರಾಜು ಆಗುತ್ತಿದೆ. ಇದರಲ್ಲಿ ನಿತ್ಯ 3.50 ಲಕ್ಷ ಲೀ. ಹಾಲು ಮಾತ್ರ ಖರ್ಚಾಗುತ್ತಿದೆ. 1.50 ಲಕ್ಷ ಲೀ ಹೊರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಉಳಿದ ಹಾಲಿನಲ್ಲಿ ಪೌಡರ್ ಹಾಗೂ ಇತರೆ ಉತ್ಪ$ನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ 174 ಹಾಲು ಉತ್ಪಾದಕರ ಸಂಘಗಳಿದ್ದು, ಇವುಗಳಲ್ಲಿ 100ಕ್ಕೂ ಹೆಚ್ಚು ಸಂಘಗಳು ಸ್ವಂತ ಕಟ್ಟಡ ಹೊಂದಿರುವುದು ಹೆಮ್ಮೆ ಸಂಗತಿ. ಎಲ್ಲಾ ರೈರೆತರು ಉತ್ತಮ ಗುಣಮಟ್ಟದ ಹಾಲು ಹಾಕಬೇಕೆಂದು ಸಲಹೆ ನೀಡಿದರು. ಮೈಸೂರು ಜಿಲ್ಲಾ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಸಹಕಾರ ಸಂಘದ ಹೆಸರಿನಲ್ಲಿ ರಾಜಕೀಯ ಬೆರಸಬಾರದು.
ಗ್ರಾಮಸ್ಥರು ಒಗ್ಗಟಾಗಿ ಸಹಕಾರ ಸಂಘವನ್ನು ಮುನ್ನಡೆಸಬೇಕು, ಬೇಸಾಯದ ಜೊತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮಾಡಬೇಕೆಂದರು. ನೇರಳಕುಪ್ಪೆ ಬಿಎಂಸಿ ಕೇಂದ್ರದ ಅಧ್ಯಕ್ಷ ಕೆ.ಗಣಪತಿ, ಗ್ರಾಪಂ ಮಾಜಿ ಸದಸ್ಯ ಹಲಗೇಗೌಡ, ಅಜೀತ್ ಕುಮಾರ್, ಸಂಘದ ಅಧ್ಯಕ್ಷ ಎನ್.ಕೆ.ಕುಮಾರ್, ಮುಖಂಡ ರವಿಕುಮಾರ್ ಮಾತನಾಡಿದರು.
ತಾಲೂಕು ವಿಸ್ತೀರ್ಣಾಧಿಕಾರಿ ಬಿ.ಗೌತಮ್, ಗ್ರಾಪಂ ಸದಸ್ಯ ಮಹೇಶ್, ಸಂಘದ ನಿರ್ದೇಶಕರಾದ ಚಂದ್ರಶೇಖರ್, ಹಲಗೇಗೌಡ, ಹರೀಶ್, ಯತೀಶ್, ಶಿವಲಿಂಗಯ್ಯ, ಮಹದೇವ್, ಪುಟ್ಟಮ್ಮ, ಕಾರ್ಯದರ್ಶಿ ಸಂತೋಷ್ ಮತ್ತಿತರರಿದ್ದರು. ಈ ವೇಳೆ ಡೇರಿ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಗ್ರಾಮದ ಯ.ರೇವಣ್ಣೇಗೌಡ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.