Advertisement

ಒಂದೇ ಸೂರಿನಡಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ

11:20 PM May 13, 2019 | Team Udayavani |

ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶದಿಂದ ಸರ್ಕಾರವೇ ಪ್ರತಿ ತಾಲೂಕಿಗೆ ಒಂದರಂತೆ ಆರಂಭಿಸಿರುವ 176 ಕರ್ನಾಟಕ ಪಬ್ಲಿಕ್‌ ಶಾಲೆಗಳ ಪ್ರವೇಶಾತಿ ಪ್ರಕ್ರಿಯೆಯೂ ಸರಳ.

Advertisement

ಪಬ್ಲಿಕ್‌ ಶಾಲೆ ಎಂದಾಕ್ಷಣ, ಹೆಚ್ಚಿನ ಶುಲ್ಕ, ವಿಶೇಷ ಸಮವಸ್ತ್ರ, ಪಠ್ಯಪುಸ್ತಕದ ಹೊರೆ ಎಂಬ ಆತಂಕ ಅನಗತ್ಯ. ಗುಣಮಟ್ಟದ ಜತೆಗೆ ಖಾಸಗಿ ಶಾಲೆಗಳಿಗೆ ಸಮಾನವಾಗಿ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶವಾಗಿದೆ.

2019-20ನೇ ಸಾಲಿಗೆ ಕರ್ನಾಟಕ ಪಬ್ಲಿಕ್‌ ಶಾಲೆಗಳು ಎಲ್ಲೆಲ್ಲಿ ತೆರೆಯಲಾಗಿದೆ ಮತ್ತು ದಾಖಲಾತಿಯ ಎಲ್ಲ ಮಾಹಿತಿ ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಡಯಟ್‌ ಕೇಂದ್ರಗಳಲ್ಲಿ ಸಿಗಲಿದೆ.

ಸರ್ಕಾರಿ ಶಾಲೆಗಳಲ್ಲಿ ಯಾವ ರೀತಿಯ ಪ್ರವೇಶ ಪ್ರಕ್ರಿಯೆ ಇದೆಯೋ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರವೇಶ ಪ್ರಕ್ರಿಯೆಯೂ ಅದೇ ಆಗಿರುತ್ತದೆ. 1ನೇ ತರಗತಿಗೆ ಸೇರಿದ ಮಗುವಿಗೆ 12ನೇ ತರಗತಿವರೆಗೂ ಒಂದೇ ಸೂರಿನಡಿ ಗುಣಮಟ್ಟ ಶಿಕ್ಷಣ ದೊರೆಯಲಿದೆ.

ಬಹುತೇಕ ಕಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇರುತ್ತದೆ. ಆದರೆ, ಹಿರಿಯ ಪ್ರಾಥಮಿಕ ಶಾಲೆ ಇರುವುದಿಲ್ಲ. ಪ್ರಾಥಮಿಕ ಶಾಲೆ(1ರಿಂದ 8ನೇ ತರಗತಿ ವರೆಗೆ) ಇದ್ದರೆ, ಪ್ರೌಢಶಾಲೆ ಇನ್ನೆಲ್ಲೋ ಇರುತ್ತದೆ.

Advertisement

ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಟ್ಟಿಗಿದ್ದರೂ ಪದವಿ ಪೂರ್ವ ಶಿಕ್ಷಣಕ್ಕೆ ದೂರದ ಊರಿಗೆ ಹೋಗಬೇಕಾದ ಸ್ಥಿತಿ ಇಂದಿಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ಪಬ್ಲಿಕ್‌ ಶಾಲೆ ಸರ್ಕಾರ ತೆರೆದಿದೆ.

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್‌ ಮಾಧ್ಯಮವು ಇರಲಿಲ್ಲ. 2019-20ನೇ ಸಾಲಿನಲ್ಲಿ ಕೆಲವು ಹೋಬಳಿ ಮಟ್ಟದಲ್ಲೂ ಕರ್ನಾಟಕ ಪಬ್ಲಿಕ್‌ ಶಾಲೆ ತೆರೆಯಲಾಗಿದೆ.

ಇಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಕನಿಷ್ಠ ಶೇ.75ರಷ್ಟು ಕಲಿಕಾ ಸಾಮರ್ಥ್ಯ ಹೊಂದಬೇಕು ಹಾಗೂ ಶೇ.25ರಷ್ಟು ವಿದ್ಯಾರ್ಥಿಗಳಯ ಕನಿಷ್ಠ ಶೇ.50ರಷ್ಟು ಕಲಿಕಾ ಸಾಮರ್ಥ್ಯ ಹೊಂದಬೇಕು ಎಂಬ ನಿರ್ದಿಷ್ಟ ಉದ್ದೇಶದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ.

ಅಲ್ಲದೆ, ಎಸ್ಸೆಸ್ಸೆಲ್ಸಿ, ಪಿಯುಸಿ ಫ‌ಲಿತಾಂಶ ಸುಧಾರಣೆಗೂ ಹತ್ತಾರು ಕ್ರಮ ತೆಗೆದುಕೊಳ್ಳಲಾಗಿದೆ. ಇದು ಸಂಪೂರ್ಣ ಸರ್ಕಾರಿ ವ್ಯವಸ್ಥೆಯೇ ಆಗಿರುವುದರಿಂದ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗಲಿರುವ ಎಲ್ಲ ಸೌಲಭ್ಯವೂ ಇಲ್ಲಿ ಓದುವ ಮಕ್ಕಳಿಗೂ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next