Advertisement
ಇದೇ ವೇಳೆಯಲ್ಲೇ ಐಐಟಿ ಬಾಂಬೆಯು ಪ್ರಪಂಚದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ 172ನೇ ಸ್ಥಾನದಲ್ಲಿದೆ. ಬೇಸರದ ಸಂಗತಿಯೆಂದರೆ, ಭಾರತದ ಯಾವೊಂದು ವಿಶ್ವವಿದ್ಯಾಲಯವೂ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲವಾದರೂ, ಟಾಪ್ 500ರಲ್ಲಿ ದೇಶದ 8 ಸಂಸ್ಥೆಗಳಿವೆ. ಮೊದಲೈದು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಮೆರಿಕದ ನಾಲ್ಕು ವಿಶ್ವವಿದ್ಯಾಲಯಗಳಿವೆ. ಮೊದಲ ಸ್ಥಾನದಲ್ಲಿ ಅಮೆರಿಕದ ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, 2ನೇ ಸ್ಥಾನದಲ್ಲಿ ಸ್ಟಾನ್‌ಫೋರ್ಡ್ ವಿವಿ, 3ನೇ ಸ್ಥಾನದಲ್ಲಿ ಹಾರ್ವರ್ಡ್ ವಿವಿ, 4ನೇ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ 5ನೇ ಸ್ಥಾನದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವಿದೆ.
ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು | ಜಾಗತಿಕ ಸ್ಥಾನ |
ಐಐಟಿ ಬಾಂಬೆ | 172 |
ಐಐಎಸ್‌ಸಿ ಬೆಂಗಳೂರು | 185 |
ಐಐಟಿ ದೆಹಲಿ | 193 |
ಐಐಟಿ ಮದ್ರಾಸ್ | 275 |
ಐಐಟಿ ಖರಗ್ಪುರ | 314 |