ಮೈಸೂರು: ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ಸಂಸ್ಥೆ ಜಾಗತಿಕ ಉನ್ನತ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಕ್ಯುಎಸ್ ಇಂಟಲಿಜೆನ್ಸ್ ಸಂಸ್ಥೆಯಿಂದ 4 ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಲಯದ ಕುಲಪತಿ ಬಿ.ಸುರೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯು.ಕೆ. ಮೂಲದ ಕ್ವಾಕರೇಲಿ ಸೈಮಂಡ್ಸ್(ಕ್ಯುಎಸ್) ಇಂಟಲಿಜೆನ್ಸ್ ಸಂಸ್ಥೆ ಜಾಗತಿಕ ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದು, ಕ್ಯುಎಸ್ ರ್‍ಯಾಂಕಿಂಗ್ ಮತ್ತು ಸ್ಟಾರ್‌ರೇಟಿಂಗ್ಸ್‌ಗಾಗಿ ಹೆಸರುವಾಸಿಯಾಗಿದೆ. ಈ ಸಂಸ್ಥೆಯ ವತಿಯಿಂದ ಜೆಎಸ್‌ಎಸ್ ಸಂಸ್ಥೆಗೆ 4 ಸ್ಟಾರ್ ರೇಟಿಂಗ್ ನೀಡಿದ್ದು, 4 ಸ್ಟಾರ್ ರೇಟಿಂಗ್ ಪಡೆದ ಕರ್ನಾಟಕದ ಮೊದಲ ಹಾಗೂ ದೇಶದ 3ನೇ ವಿಶ್ವವಿದ್ಯಾನಿಲಯವೆಂಬ ಹಿರಿಮೆ ನಮ್ಮ ಸಂಸ್ಥೆ ಪಡೆದಿದೆ.
ಕಳೆದ 2008ರಲ್ಲಿ ಯುಜಿಸಿಯಿಂದ ಮಾನ್ಯತೆ ಪಡೆದ ಜೆಎಸ್‌ಎಸ್ ಡೀಮ್ಡ್ ವಿವಿ ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ಊಟಿಯಲ್ಲಿರುವ ಫಾರ್ಮಸಿ ಸೇರಿ ನಾಲ್ಕನ್ನು ಸೇರಿಸಿಕೊಂಡಿತ್ತು. ನಂತರ ವಾಟರ್ ಅಂಡ್ ಹೆಲ್ತ್, ಹೆಲ್ತ್ ಸಿಸ್ಟಂ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗಗಳನ್ನು ತೆರೆಯಲಾಗಿತ್ತು. ಇದರಿಂದ ನಮ್ಮ ಸಂಸ್ಥೆಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ, ನ್ಯಾಷನಲ್ ರ್‍ಯಾಂಕಿಂಗ್‌ನಲ್ಲಿ 50 ಸ್ಥಾನದೊಳಗೆ ಗುರುತಿಸಲ್ಪಿಟ್ಟಿದ್ದು, ರಾಜ್ಯ ಸರ್ಕಾರದ ರ್‍ಯಾಂಕಿಂಗ್‌ನಲ್ಲೂ ಉತ್ತಮ ಸ್ಥಾನ ಪಡೆದಿದೆ ಎಂದರು.
ಸಂಸ್ಥೆ ಹೆಸರು ಬದಲಾವಣೆ: ಜೆಎಸ್‌ಎಸ್ ವಿವಿಯಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 550ಬೋಧಕ ಹಾಗೂ 500ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಆರಂಭದಲ್ಲಿ 80 ಸಂಶೋಧನಾ ಪ್ರಬಂಧಗಳು ಮಂಡನೆಯಾಗಿದ್ದು, ಇದೀಗ 800 ಪಬ್ಲಿಕೇಷನ್ ಹೊಂದಿರುವುದು ಸಂಸ್ಥೆಯ ಪ್ರಗತಿಗೆ ಕಾರಣವಾಗಿದೆ. ಆದರೆ ಇತ್ತೀಚಿಗೆ ಸುಪ್ರೀಂಕೋಟ್ ಡೀಮ್ಡ್ ವಿವಿಗಳು ಸಹ ವಿಶ್ವವಿದ್ಯಾನಿಲಯ ಎಂಬ ಹೆಸರು ಬಳಸಬಾರದೆಂದು ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ವಿವಿ ಬದಲಿಗೆ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ಸಂಸ್ಥೆ ಎಂದು ನಾವಕರಣ ಮಾಡಲಾಗಿದೆ. ಈಗಾಗಲೇ ನಮ್ಮ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿ ಅಧಿಸೂಚನೆ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪತ್ರ ವ್ಯವಹಾರಗಳು ಇದೇ ಹೆಸರಿನಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಕ್ಯುಎಸ್ ಇಂಟಲಿಜೆನ್ಸ್ ಸಂಸ್ಥೆಯ ಅಶ್ವಿನ್ ಫರ್ನಾಂಡೀಸ್ ಮಾತನಾಡಿ, ಜಗತ್ತಿನ 100 ದೇಶಗಳ 500 ವಿವಿಗಳಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಇವುಗಳ ಅಂಕಿ ಅಂಶಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪಡೆದುಕೊಂಡು ರೇಟಿಂಗ್ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕ್ಯುಎಸ್ ಇಂಟಲಿಜೆನ್ಸ್ ಸಂಸ್ಥೆಯ ಅಶ್ವಿನ್ ಫರ್ನಾಂಡೀಸ್ ಅವರು 4 ಸ್ಟಾರ್ ರೇಟಿಂಗ್ ಹೊಂದಿರುವ ಪ್ರಮಾಣಪತ್ರವನ್ನು ಜೆಎಸ್‌ಎಸ್ ಸಂಸ್ಥೆ ಕುಲಪತಿ ಡಾ.ಬಿ.ಸುರೇಶ್ ಅವರಿಗೆ ಹಸ್ತಾಂತರಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಡಾ.ಪಿ.ಕುಶಾಲಪ್ಪ, ಡಾ.ಪಿ.ನಿಲಾನಿ, ಡಾ.ಸುದೀಂದ್ರ¸ಟ್ ಹಾಜರಿದ್ದರು.