Advertisement

ಅಂಚೆ ಇಲಾಖೆಯಿಂದ ಹೊಸ ಸೇವೆ : ಕ್ಯುಆರ್‌ ಕೋಡ್‌ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆ

12:03 AM May 17, 2023 | Team Udayavani |

ಮಂಗಳೂರು: ಕೇಂದ್ರ ಸರಕಾರವು ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ದೇಶಾದ್ಯಂತ ನಗದು ರಹಿತ ಹಣದ ವ್ಯವಹಾರ ಮಾಡುವ ಬಗ್ಗೆ ಉತ್ತೇಜನ ನೀಡುತ್ತ ಬಂದಿದ್ದು, ಭಾರತೀಯ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಮೂಲಕ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ, ಸೆಲೂನ್‌ ಗಳಲ್ಲಿ, ತರಕಾರಿ/ಹೂ/ಹಣ್ಣಿನ ಅಂಗಡಿ, ಮೊಬೈಲ್‌ ಅಂಗಡಿ ಇತ್ಯಾದಿಗಳಲ್ಲಿ ಕ್ಯೂಆರ್‌ ಕೋಡ್‌ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

Advertisement

ಈ ಸೇವೆಯನ್ನು ಪ್ರಾರಂಭಿಸಲು ಐಪಿಪಿಬಿ (ಇಂಡಿಯಾ ಪೋಸ್ಟಲ್‌ ಪೇಮೆಂಟ್ಸ್‌ ಬ್ಯಾಂಕ್‌) ಖಾತೆ ಹೊಂದಿರ ಬೇಕಾಗಿರುತ್ತದೆ ಹಾಗೂ ಅದನ್ನು ಅಂಚೆ ಸಿಬಂದಿಯವರು ಕ್ಯುಆರ್‌ ಕೋಡ್‌ಗೆ ಸಂಯೋಜಿಸಿ ಕೊಡು ತ್ತಾರೆ. ವ್ಯಾಪಾರಿಗಳು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮೂಲಕ ಸ್ವೀಕರಿಸ  ಲಾದ ಮೊತ್ತವನ್ನು ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್‌ ಮ್ಯಾನ್‌ ಮುಖಾಂತರ ಸ್ವೀಕರಿಸ ಬಹುದು. ಮೊಬೈಲ್‌ನಲ್ಲಿ ಐಪಿಪಿಬಿ ಖಾತೆಯ ಕ್ಯುಆರ್‌ ಕೋಡ್‌ ಬಳಸಿ ಯಾವುದೇ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು. ಸ್ಥಳದಲ್ಲೇ ಐಪಿಪಿಬಿ ಖಾತೆಯನ್ನು ಕೂಡ ಮಾಡಿಕೊಡಲಾ ಗುವುದು ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next