Advertisement
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕತಾರ್ ದೇಶದ ಭಾರತೀಯ ರಾಯಭಾರಿ ಡಾ| ದೀಪಕ್ ಮಿತ್ತಲ್ ಅವರು ಸಂಘದ ಚಟುವಟಿಕೆ, ಕತಾರಿನ ಭಾರತೀಯರ ಕೊಡುಗೆಗಳನ್ನು ನೆನಪಿಸಿಕೊಂಡು ಮೆಚ್ಚುಗೆ ಸೂಚಿಸಿದರು.
Related Articles
Advertisement
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯಾ ಶೆಟ್ಟಿ ಅವರು “ವಸಂತೋತ್ಸವ’ದ ಆಚರಣೆ ಬಗ್ಗೆ ವಿವರಿಸಿ, ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಳಿಕ ಸಂಘದ ಮಕ್ಕಳ ಕಾರ್ಯದರ್ಶಿ ರಶ್ಮಿ ಜಯರಾಂ ಅವರು ತಮ್ಮ ಮಧುರ ಕಂಠದಿಂದ ಸಭಿಕರನ್ನು ಮನೋರಂಜನೆಯ ಯಾತ್ರೆಗೆ ಕೊಂಡೊಯ್ದರು.
ಭರತನಾಟ್ಯ ಶೈಲಿಯಲ್ಲಿ ಸ್ವಾಗತ ನೃತ್ಯದೊಂದಿಗೆ ಅಧಿಕೃತವಾಗಿ ವಸಂತೋತ್ಸವಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ವರ್ಣಮಯ ಹಾಗೂ ಮನಮೋಹಕ ಪ್ರದಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. 20 ನಿಮಿಷಗಳ ಇವರ ನಾಟ್ಯ ಅಮೋಘವಾಗಿತ್ತು.
ಅನಂತರ ಸಂಘದ ಅಧ್ಯಕ್ಷರಾದ ನಾಗೇಶ್ ರಾವ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೀತಿ ರಮೇಶ್ ಅವರು ಯೋಗರಾಜ್ ಭಟ್ ಹಾಗೂ ರವಿ ಹೆಗ್ಡೆ ಅವರನ್ನು ಪರಿಚಯಿಸಿದರು. ಅಕ್ಷಯ ಶೆಟ್ಟಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಸ್ಥಳೀಯ ಗಾಯಕರು ಹಾಗೂ ಸಂಗೀತ ವಾದ್ಯದವರ ಒಂದು ತಂಡ 30 ನಿಮಿಷಗಳ ಕಾಲ ಸುಮಧುರ ಗಾಯನವನ್ನು ಪ್ರದರ್ಶಿಸಿತು. 5 ಜನ ಗಾಯಕರು ಜಾನಪದ ಗೀತೆ, ಸಮೂಹ ಗೀತೆ ಹಾಗೂ ಭಾವಗೀತೆಗಳ ಮಿಶ್ರಣವನ್ನು ಅದ್ಭುತವಾಗಿ ಹಾಡಿ ತಮ್ಮ ಸುಮಧುರ ಕಂಠದಿಂದ ಕೇಳುಗರ ಮನ ತಣಿಸಿದರು.
“ಆಯನ’ ಎಂಬ ಬೆಂಗಳೂರು ಮೂಲದ ತಂಡದಿಂದ 40 ನಿಮಿಷಗಳ ಕಾಲ ಉತ್ಸಾಹಭರಿತ, ಉÇÉಾಸ ತುಂಬಿದ ನೃತ್ಯ ಪ್ರದರ್ಶನ ಕಾರ್ಯಕ್ರಮದ ಸೊಬಗನ್ನು ಮುಗಿÇÉೆತ್ತರಕ್ಕೆ ಏರಿಸಿತು.
ಬೆಂಗಳೂರಿನಲ್ಲಿ “ಲಾಕ್‌ಡೌನ್’ ಮಧ್ಯೆ ಈ ಕಲಾವಿದರು ಸೇರಿ ಈ ಅಮೋಘ ಪ್ರಸ್ತುತಿಯನ್ನು ಕತಾರಿನ ಕನ್ನಡಿಗರಿಗಾಗಿ ಸಮರ್ಪಿಸಿದರು. ಬಳಿಕ ನಡೆದ ನೃತ್ಯ ಪ್ರದರ್ಶನದೊಂದಿಗೆ 2021 ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮ ಸಮಾಪ್ತವಾಯಿತು.