ಕೊರಟಗೆರೆ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಬೃಹತ್ ಹೆಬ್ಬಾವೊಂದನ್ನು ಉರಗತಜ್ಞ ದಿಲೀಪ್ ಮತ್ತು ಅವರ ತಂಡ ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಕೊರಟಗೆರೆ ಪಟ್ಟಣದ ಹೊರವಲಯದ ಡಿಗ್ರಿ ಕಾಲೇಜ್ ಸಮೀಪದಲ್ಲಿರುವ ಮಂಜುನಾಥ್ ಎನ್ನುವವರ ಟೀ ಅಂಗಡಿ ಬಳಿ ಕಾಣಿಸಿಕೊಂಡ ಈ ಬೃಹತ್ ಹೆಬ್ಬಾವುವನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದರು.
ಸ್ಥಳೀಯರು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಉರಗತಜ್ಞರಿಗೆ ಕರೆ ಮಾಡಿ ತಿಳಿಸಿದ್ದರು, ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ದಿಲೀಪ್ ಹಾಗೂ ಅವರ ತಂಡ ಟೀ ಅಂಗಡಿ ಮುಂಭಾಗ ಕಲ್ಲುಗಳ ಅಡಿಯಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಈ ಹೆಬ್ಬಾವು ಸುಮಾರು 12ಕೆ.ಜಿ ತೂಕ, 10 ಅಡಿ ಉದ್ದವಿದ್ದು 15ವರ್ಷದ ಬೃಹತ್ ಗಾತ್ರದ ಹೆಬ್ಬಾವು ಇದಾಗಿದೆ.
ಸೆರೆ ಹಿಡಿದ ಹೆಬ್ಬಾವನ್ನು ವಲಯ ಅರಣ್ಯಾಧಿಕಾರಿ ಸುರೇಶ್ ಮಾರ್ಗದರ್ಶನದಂತೆ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಸಾರ್ವಜನಿಕರಲ್ಲಿ ಮನವಿ
ಹಾವುಗಳು ಕಂಡಾಗ ಅವುಗಳನ್ನು ಕೊಲ್ಲಬೇಡಿ ಎಂದು ಸಾರ್ವಜನಿಕರಲ್ಲಿ ಉರಗ ತಜ್ಞ ದಿಲೀಪ್ ಮನವಿ ಮಾಡಿದರು.
ವನ್ಯಜೀವಿ ಉರಗ ಜಾಗೃತಿ ಸಂಸ್ಥೆಯ ದಿಲೀಪ್, ಗುರುಕಿರಣ್, ಹನುಮಯ್ಯ, ನವೀನ್‌ಕುಮಾರ್, ಡಿಆರ್‌ಎಫ್‌ಓ ಚಾಂದ್‌ಪಾಷ, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.