Advertisement
ಈ ವಿಷಯವನ್ನು ಸದ್ಯ ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಇಂಡಿಯಾ – ಬಾಂಗ್ಲಾದೇಶ ವ್ಯಾಪಾರ ವೇದಿಕೆಯಲ್ಲಿ ಮಾತನಾಡುತ್ತಾ ಶೇಖ್ ಹಸೀನಾ ಅವರು ಈರುಳ್ಳಿ ರಫ್ತು ನಿಷೇಧದಿಂದ ಬಾಂಗ್ಲಾದಲ್ಲಿ ಉಂಟಾಗಿರುವ ತೊಂದರೆ ಮತ್ತು ಸ್ವತಃ ತನಗೇ ಈರುಳ್ಳಿ ಬಿಸಿ ತಟ್ಟಿರುವುದನ್ನು ಲಘು ಹಾಸ್ಯದ ದಾಟಿಯಲ್ಲಿ ಹೇಳಿಕೊಂಡಿದ್ದಾರೆ.ತಮ್ಮ ಭಾಷಣದಲ್ಲಿ ಹಸೀನಾ ಹೇಳಿದ್ದು ಇಷ್ಟು…
‘ಈರುಳ್ಳಿ ರಫ್ತು ನಿಷೇಧದಿಂದ ನಮಗೆಲ್ಲಾ ಸ್ವಲ್ಪ ತೊಂದರೆಯಾಗಿದೆ. ನೀರುಳ್ಳಿ ರಫ್ತನ್ನು ನಿಲ್ಲಿಸಿದಿರುವುದ್ಯಾಕೆ ಎಂದೇ ನನಗೆ ಅರ್ಥವಾಗುತ್ತಿಲ್ಲ? ಮತ್ತು ಈ ಕುರಿತಾಗಿ ಸ್ವಲ್ಪ ಮುನ್ಸೂಚನೆ ನೀಡಿರುತ್ತಿದ್ದರೆ ನಾವು ಬೇರೆ ಕಡೆಯಿಂದ ತರಿಸಿಕೊಳ್ಳುತ್ತಿದ್ದೆವು. ನನ್ನ ಮನೆಯಲ್ಲಿ ತಯಾರಿಸುವ ಎಲ್ಲಾ ಅಡುಗೆಗಳಿಗೂ ಈರುಳ್ಳಿ ಹಾಕದಂತೆ ನಾನು ನನ್ನ ಅಡುಗೆಯವರಿಗೆ ಹೇಳಿದ್ದೇನೆ. ಇನ್ನು ಮುಂದೆ ಈ ರೀತಿ ಯಾವುದೇ ವಸ್ತುಗಳ ಮೇಲಿನ ರಫ್ತನ್ನು ನಿಷೇಧ ಮಾಡುವುದಾದರೇ ನಮಗೆ ಸ್ವಲ್ಪ ಮುಂಚಿತವಾಗಿ ತಿಳಿಸಿ’ ಎಂದು ಹಸೀನಾ ಅವರು ಈರುಳ್ಳಿ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.