Advertisement
ಗುರುವಾರ ನಡೆದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ 7ನೇ ರ್‍ಯಾಂಕಿಂಗ್‌ನ ಸಿಂಧು ಚೀನದ ಜಾಂಗ್ ಯಿ ಮ್ಯಾನ್ ವಿರುದ್ಧ 14-21, 21-15, 14-21 ಅಂತರದ ಸೋಲುಂಡರು. ಇದರೊಂದಿಗೆ ಯುರೋಪಿಯನ್ ಲೆಗ್‌ನಲ್ಲಿ ಸಿಂಧು ನಿರಾಶಾದಾಯಕ ಆರಂಭ ಕಾಣಬೇಕಾಯಿತು. ಮುಂದಿನ ವಾರ ಆರಂಭವಾಗಲಿರುವ ಪ್ರತಿಷ್ಠಿತ “ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ’ಯ ತಯಾರಿಗೆ ಇದೊಂದು ಹಿನ್ನಡೆ ಆಗಿದೆ.
Related Articles
ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಚೀನದ ಲು ಗುವಾಂಗ್ ಝು ವಿರುದ್ಧ 21-16, 21-23, 21-18 ಅಂತರದ ಗೆಲುವು ಸಾಧಿಸಿದರು. 67 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
Advertisement