Advertisement

ಕೊರಿಯ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ದ್ವಿತೀಯ ಸುತ್ತಿಗೆ

11:00 PM Apr 06, 2022 | Team Udayavani |

ಸುನ್‌ಚನ್‌: ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಅಮೋಘ ಗೆಲುವು ಸಾಧಿಸುವ ಮೂಲಕ ಕೊರಿಯ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಕೂಟದ ಪ್ರೀ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಅವರು ಅಮೆರಿಕದ ಲಾರೆನ್‌ ಲ್ಯಾಮ್‌ ಅವರನ್ನು 21-15, 21-14 ಗೇಮ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.

ಇತ್ತೀಚೆಗೆ ಸ್ವಿಸ್‌ ಓಪನ್‌ ಪ್ರಶಸ್ತಿ ಗೆದ್ದಿರುವ ಮೂರನೇ ಶ್ರೇಯಾಂಕದ ಸಿಂಧು ಮುಂದಿನ ಸುತ್ತಿನಲ್ಲಿ ಜಪಾನಿನ ಆಯಾ ಒಹೋರಿ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ:ಟಿ20 ಪಂದ್ಯ: ಪಾಕಿಸ್ತಾನ ವಿರುದ್ಧ ಆಸೀಸ್‌ಗೆ ಜಯ

ಪುರುಷರ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ವಿಶ್ವದ 35ನೇ ಶ್ರೇಯಾಂಕಿತ ಡ್ಯಾರೆನ್‌ ಲೀವ್‌ ಅವರನ್ನು 22-20, 21-11 ಗೇಮ್‌ಗಳಿಂದ ಕೆಡಹಿದ ಶ್ರೀಕಾಂತ್‌ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.

Advertisement

ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತ ಶ್ರೀಕಾಂತ್‌ ಮುಂದಿನ ಸುತ್ತಿನಲ್ಲಿ ಇಸ್ರೇಲಿನ ಮಿಶಾ ಅವರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಹಾಗೂ ಎಂಆರ್‌ ಅರ್ಜುನ್‌ ಮತ್ತು ಧ್ರುವ ಕಪಿಲ ಅವರು ಸುಲಭ ಗೆಲುವಿನೊಂದಿಗೆ ದ್ವಿತೀಯ ಸುತ್ತು ತಲುಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next