Advertisement

ಫ್ರೆಂಚ್‌ ಬ್ಯಾಡ್ಮಿಂಟನ್‌: ಸಿಂಧು ಸೆಮಿಫೈನಲ್‌ಗೆ

07:50 AM Oct 28, 2017 | Team Udayavani |

ಪ್ಯಾರಿಸ್‌: ಭಾರತದ ಖ್ಯಾತ ಟೆನಿಸ್‌ ತಾರೆ ಪಿ.ವಿ.ಸಿಂಧು ಅವರು ಫ್ರೆಂಚ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ ತಲುಪಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು ಅವರು ಚೀನಾ ಎದುರಾಳಿ ಚೆನ್‌ ಯೂಫೈರನ್ನು 21-14, 21-14ರಿಂದ ಮಣಿಸಿದರು.

Advertisement

ಎರಡೂ ಗೇಮ್‌ಗಳಲ್ಲಿ ಸಿಂಧುಗೆ ಸರಿಸಮ ಹೋರಾಟವನ್ನು ಚೆನ್‌ ತೋರಲಿಲ್ಲ ಎನ್ನುವುದು ಗಮನಾರ್ಹವಾಗಿದೆ. ದುಃಖದ ಸಂಗತಿಯೆಂದರೆ ಭಾರತದ ಮತ್ತೂಬ್ಬ ಪ್ರಮುಖ ಆಟಗಾರ್ತಿ ಸೈನಾ ನೆಹ್ವಾಲ್‌ ಸೋತು ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌. ಎಸ್‌.ಪ್ರಣಯ್‌ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಡೆನ್ಮಾರ್ಕ್‌ನ ಹ್ಯಾನ್ಸ್‌-ಕ್ರಿಸ್ಟಿಯನ್‌ ವಿಟ್ಟಿಂಗಸ್‌ರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಸಾÀå… ಪ್ರಣೀತ್‌ ಸೋತು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next