ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಜಪಾನ್ ನ ಅಕಾನೆ ಯಮಾಗುಚಿ ಅವರನ್ನು ಸೋಲಿಸಿದರು. ತವರು ನಾಡಿನ ಆಟಗಾರ್ತಿಯನ್ನು 21-13, 22-20 ಅಂತರದ ನೇರ ಸೆಟ್ ಗಳಿಂದ ಸೋಲಿಸಿದ ಭಾರತದ ಭರವಸೆಯ ಆಟಗಾರ್ತಿ ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿದರು.
ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಮೊದಲ ಸೆಟ್ ನ್ನು ಸುಲಭದಲ್ಲಿ ಜಯಿಸಿದರು. ಎರಡನೇ ಸೆಟ್ ನಲ್ಲಿ ಅಕಾನೆ ಯಮಾಗುಚಿ ಭಾರೀ ಸ್ಪರ್ಧೆ ಒಡ್ಡಿದರು. ರೋಮಾಂಚನಕಾರಿಯಾಗಿ ನಡೆದ ಎರಡನೇ ಸೆಟ್ ನ್ನು ಕೂಡಾ ವಶಪಡಿಸಿಕೊಂಡ ಸಿಂಧು ಗೆಲುವಿನ ನಗೆ ಬೀರಿದರು.
ಇದನ್ನೂ ಓದಿ:ಸಂಕಷ್ಟ ತಂದಿತ್ತ ಲಂಕಾ ಸರಣಿ: ಕೃನಾಲ್ ಪಾಂಡ್ಯ ಬಳಿಕ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢ
ಬಾಕ್ಸಿಂಗ್ ನಲ್ಲಿ ಲವ್ಲೀನಾ ಬರ್ಗೋಹೈನ್ ಸೆಮಿ ಫೈನಲ್ ಹಂತ ತಲುಪಿದ್ದಾರೆ. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಆರ್ಚರ್ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ್ದಾರೆ. ಮತ್ತೊಂದೆಡೆ ವನಿತಾ ಹಾಕಿ ತಂಡ ಇಂದು ಐರ್ಲೆಂಡ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿರಿಸಿಕೊಂಡಿದೆ.