Advertisement

Indonesia Open: ಮೊದಲ ಸುತ್ತಲ್ಲೇ ಸೋತ ಸಿಂಧು

11:39 PM Jun 05, 2024 | Team Udayavani |

ಜಕಾರ್ತಾ: ಪಿ.ವಿ. ಸಿಂಧು ಅವರ ಅಸ್ಥಿರ ಪ್ರದರ್ಶನ ಮುಂದುವರಿದಿದೆ. “ಬಿಡ್ಲುಎಫ್ ಇಂಡೋನೇಷ್ಯ ಓಪನ್‌ ಸೂಪರ್‌ 1000′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.

Advertisement

ಬುಧವಾರ ನಡೆದ ಮುಖಾಮುಖೀ ಯಲ್ಲಿ ಚೈನೀಸ್‌ ತೈಪೆಯ ಸು ವೆನ್‌ ಚಿ 21-15, 15-21, 21-14 ಅಂತರದಿಂದ ಸಿಂಧು ಅವರನ್ನು ಪರಾಭವಗೊಳಿಸಿದರು. 80 ನಿಮಿಷಗಳ ತನಕ ಇವರ ಆಟ ಸಾಗಿತು. ಇದು ಸು ವೆನ್‌ ಚಿ ವಿರುದ್ಧ ಸಿಂಧು ಅನುಭವಿಸಿದ ಮೊದಲ ಸೋಲು.

ವನಿತಾ ಡಬಲ್ಸ್‌ನಲ್ಲಿ ಋತುಪರ್ಣಾ ಪಾಂಡಾ-ಶ್ವೇತಪರ್ಣಾ ಪಾಂಡಾ ಕೂಡ ಕೊರಿಯಾದ 6ನೇ ಶ್ರೇಯಾಂಕದ ಕಿಮ್‌ ಸೊ ಯಾಂಗ್‌-ಕಾಂಗ್‌ ಹೀ ಯಾಂಗ್‌ ವಿರುದ್ಧ ಸೋಲಿನ ಆಘಾತಕ್ಕೆ ಸಿಲುಕಿದರು.

Advertisement

Udayavani is now on Telegram. Click here to join our channel and stay updated with the latest news.

Next