Advertisement

ಬ್ಯಾಡ್ಮಿಂಟನ್‌ : ಸಿಂಧು,ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ ಫೈನಲ್‌ಗೆ: ಸೈನಾಗೆ ಸೋಲು

10:45 PM Apr 28, 2022 | Team Udayavani |

ಮನಿಲಾ (ಫಿಲಿಪ್ಪೀನ್ಸ್‌): ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ. ಸಿಂಧು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಮತ್ತೋರ್ವ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ ಪರಾಭವಗೊಂಡಿದ್ದಾರೆ.

Advertisement

ಪಿ.ವಿ. ಸಿಂಧು ಸಿಂಗಾಪುರದ ಕೆಳ ಕ್ರಮಾಂಕದ ಆಟಗಾರ್ತಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ 100ನೇ ಸ್ಥಾನದಲ್ಲಿರುವ ಯೆ ಯಾನ್‌ ಜಾಸ್ಲಿನ್‌ ಹೂಯಿ ಅವರನ್ನು 21-16, 21-16 ಅಂತರದಿಂದ ಮಣಿಸಿದರು. ಇವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಚೀನದ 3ನೇ ಶ್ರೇಯಾಂಕದ ಆಟಗಾರ್ತಿ ಹೆ ಬಿನ್‌ ಜಿಯಾವೊ.

ಕಳೆದ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಹೋರಾಟದಲ್ಲಿ ಜಿಯಾವೊ ವಿರುದ್ಧ ಸಿಂಧು ಜಯ ಸಾಧಿಸಿದ್ದರು. ಆದರೆ ಸಿಂಧು ವಿರುದ್ಧ ಜಿಯಾವೊ 9-7ರ ಮುನ್ನಡೆ ಹೊಂದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜಪಾನ್‌ನ ಅಕಿರ ಕೋಗ-ತೈಚಿ ಸೈಟೊ ವಿರುದ್ಧ 21-17, 21-15 ಅಂತರದ ಗೆಲುವು ಒಲಿಸಿಕೊಂಡರು.

ಈ ಕೂಟದಲ್ಲಿ 4ನೇ ಪದಕ ಗೆಲ್ಲುವ ಸೈನಾ ನೆಹ್ವಾಲ್‌ ಕನಸು ಚೀನದ ವಾಂಗ್‌ ಜಿ ಯಿ ಅವರಿಂದ ಭಗ್ನಗೊಂಡಿತು. ವಿಶ್ವದ 16ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ವಾಂಗ್‌ ಜಿ ಯಿ 12-21, 21-17, 21-13ರಿಂದ ಸೈನಾಗೆ ಸೋಲುಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next