Advertisement

ಆಂಧ್ರ ಸರ್ಕಾರದ ಡಿಸಿ ಹುದ್ದೆಗೆ ಸಿಂಧು ಒಪ್ಪಿಗೆ

10:20 AM Feb 25, 2017 | Team Udayavani |

ಹೈದ್ರಾಬಾದ್‌: ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಆಂಧ್ರ ಸರ್ಕಾರ ನೀಡಿರುವ ಡೆಪ್ಯುಟಿ ಕಲೆಕ್ಟರ್‌ ಹುದ್ದೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಂಧು ತಾಯಿ ಖಚಿತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

Advertisement

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಾಗ ಸಿಂಧುಗೆ ಗ್ರೂಪ್‌-1 ಆಫೀಸರ್‌ ಉದ್ಯೋಗ ನೀಡುವುದಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಭರವಸೆ ನೀಡಿತ್ತು. ಹಾಗೇ 3 ಕೋಟಿ ರೂ. ನಗದು ವಿತರಿಸಿತ್ತು. ಅದೇ ರೀತಿ ತೆಲಂಗಾಣ ಸರ್ಕಾರ ಕೂಡ 5 ಕೋಟಿ ರೂ. ವಿತರಿಸಿತ್ತು. ಸಿಂಧು ಸದ್ಯ ಭಾರತ್‌ ಪೆಟ್ರೋಲಿಯಂನಲ್ಲಿ ಉಪ ವ್ಯವಸ್ಥಾಪಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಸಿಂಧು ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಬಹುಶಃ ಮುಂದಿನ ಐದಾರು ವರ್ಷಗಳಲ್ಲಿ ಸಿಂಧುಗೆ ಐಎಎಸ್‌ ದರ್ಜೆ ಸಿಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next