Advertisement
ಎಳವೆಯಲ್ಲೇ ಕೆಮರಾ ಎದುರಿಸಿದ್ದ ಅವರು ಅದೇ ಕಾರಣದಿಂದ ಸರ್ಕಸ್ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರೊಂದಿಗೆ ಕಿಂಚಿತ್ತೂ ಅಳುಕಿಲ್ಲದೆ ನಟಿಸಿ ಉತ್ತಮ ಪ್ರದರ್ಶನವನ್ನೂ ನೀಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.
Related Articles
Advertisement
ರಚನಾ ರೈ ಅವರು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ್ದು, ಓ ಮೈ ಡಾಗ್ ಎಂಬ ಕೃತಿಯೊಂದನ್ನು ಬರೆದಿದ್ದಾರೆ. ಇದು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಇದು ಅವರ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷಿ. ಈ ಕೃತಿಯ 1,000ಕ್ಕಿಂತಲೂ ಹೆಚ್ಚು ಪ್ರತಿಗಳು ಒಂದೇ ದಿನ ಮಾರಾಟವಾಗಿತ್ತು ಎಂಬುದು ಗಮನಾರ್ಹ ಸಂಗತಿ. ಪ್ರಾಣಿಪ್ರಿಯೆ
ರಚನಾ ರೈ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿರುವ ಅವರು ಎಷ್ಟೋ ಪ್ರಾಣಿಗಳನ್ನು ಸಂಕಷ್ಟ, ಅಪಾಯದಿಂದ ರಕ್ಷಿಸಿದ್ದಾರೆ. ಇದಕ್ಕಾಗಿ ಅವರಿಗೆ ಭಾರೀ ಮೆಚ್ಚುಗೆಯೂ ಸಿಕ್ಕಿದೆ. ನಾಲ್ಕು ಸಿನಿಮಾಗಳಿಗೆ ಸಹಿ
ನಟನೆಯ ಬಗ್ಗೆ ಮೂಲತಃ ತಾನು ಡ್ಯಾನ್ಸರ್ ಆಗಿದ್ದ ಕಾರಣ ನಟನೆ ಹೆಚ್ಚು ಕಷ್ಟವಾಗಲಿಲ್ಲ. ವಿನೀತ್ ಮತ್ತು ಕದ್ರಿ ರಾಕೇಶ್ ಅವರ ಮೂಲಕ ರೂಪೇಶ್ ಶೆಟ್ಟರ ತಂಡಕ್ಕೆ ಸೇರಿಕೊಂಡೆ. ಅಲ್ಲಿನ ಟೀಂ ವರ್ಕ್ ನನಗೆ ತುಂಬಾ ಖುಷಿ ಕೊಟ್ಟಿದೆ. ಅಂಥ ತಂಡದಲ್ಲಿ ಕೆಲಸ ಮಾಡುವುದು ದೊಡ್ಡ ಅದೃಷ್ಟ ಎಂದೇ ಹೇಳಬೇಕು. ಸರ್ಕಸ್‌ನಲ್ಲಿ ನಟಿಸಿದ ಬಳಿಕ ನನಗೆ ಕನ್ನಡದ ಹಲವಾರು ಸಿನಿಮಾಗಳಿಂದ ಆಫರ್ ಬಂದಿದ್ದು, ಈಗಾಗಲೇ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಅದರಲ್ಲೊಂದು ಸತೀಶ್ ನೀನಾಸಂ ಅವರ ಸಿನಿಮಾ. ಉಳಿದವಗಳ ಬಗ್ಗೆ ಸದ್ಯ ಹೇಳಲು ಸಾಧ್ಯವಿಲ್ಲ ಎಂಬುದು ರಚನಾ ಅವರ ಮಾತು. ಸರ್ಕಸ್ ಸಿನಿಮಾ ಅವರಿಗೆ ಹೆಸರು ತಂದು ಕೊಡಲಿದೆ. ಅಷ್ಟರ ಮಟ್ಟಿಗೆ ಅವರು ಅಭಿನಯದಲ್ಲಿ ಪಳಗಿದ್ದಾರೆ.