Advertisement
ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು -2018 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಸೋತಾಗ ನಿರಾಶೆಯನ್ನು ಅನುಭವಿಸದೆ, ಬದುಕಿನ ಧ್ಯೇಯವನ್ನು ಮರೆಯದೆ, ಗೆಲುವಿನತ್ತ ಮುನ್ನುಗ್ಗಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವರ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಮನಸ್ಸನ್ನು ಸದಾ ಕ್ರಿಯಾಶೀಲವಾಗಿರಿಸುವ ವಿದ್ಯಾರ್ಥಿಗಳ ಕನಸನ್ನು ಈಡೇರಿಸುವ ಕಾರ್ಯವನ್ನು ಈ ಕಾಲೇಜು ಮಾಡುತ್ತಿದೆ. ಇದರ ಸಾಕಾರಕ್ಕಾಗಿ ಸಮಾಜಮುಖಿ ವ್ಯಕ್ತಿತ್ವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ವೈವಿಧ್ಯಮಯ ಸ್ಪರ್ಧೆಗಳುಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ವಿಜ್ಞಾನ ಮಾದರಿ, ಚರ್ಚಾಸ್ಪರ್ಧೆ, ಕಂಪ್ಯೂಟರ್ ಪವರ್ ಪಾಯಿಂಟ್, ಮುಖವರ್ಣಿಕೆ, ಪ್ರಾಕೃತಿಕ ರಂಗೋಲಿ, ಗೂಡು ದೀಪ, ದೃಶ್ಯಕಲೆ, ಚದುರಂಗ, ಯವವಿಜ್ಞಾನಿ ಸ್ಪರ್ಧೆಗಳು ನಡೆದವು. ತತ್‌ಕ್ಷಣವೇ ಬಹುಮಾನ ಗೆಲ್ಲಬಹುದಾದ ಆಸಕ್ತಿದಾಯಕ ಸ್ಪರ್ಧೆಗಳಾದ ಸುಡೊಕು, ಪದಬಂಧ, ಒಗಟು, ಘನಾಕೃತಿಯ ಜೋಡಣೆ, ಏಕಾಗ್ರತೆಯ ಪರೀಕ್ಷೆಗಳನ್ನು ನಡೆಸಲಾಯಿತು. ಉಪಪ್ರಾಂಶುಪಾಲ ಪರಮೇಶ್ವರ ಶರ್ಮರ ನೇತೃತ್ವದಲ್ಲಿ ಅಡ್ಯನಡ್ಕದ ವಾರಣಾಸಿಯನ್ನು ಸಂದರ್ಶಿಸಿದ ವಿದ್ಯಾರ್ಥಿಗಳು ಪ್ರಗತಿಪರ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿಗಳನ್ನು ಪಡೆದುಕೊಂಡರು. ಸುಮಾರು 26 ಪ್ರೌಢಶಾಲೆಗಳ 636 ವಿದ್ಯಾರ್ಥಿಗಳು ಮತ್ತು 51 ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.