Advertisement
ಉದಯವಾಣಿ ಮತ್ತು ಆರ್ಟಿಸ್ಟ್ ಫೋರಂ ಉಡುಪಿ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ‘ಚಿಣ್ಣರ ಬಣ್ಣ – 2018’ ತಾಲೂಕು ಮಟ್ಟದ ಉದಯವಾಣಿ ಚಿತ್ರಕಲಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಪರ್ಧಾ ವಿಷಯದ ಆಯ್ಕೆಯ ಚೀಟಿ ಎತ್ತುವ ಮೂಲಕ ಚಾಲನೆ ನೀಡಲಾಯಿತು.
ಜಿ.ಎಲ್. ಆಚಾರ್ಯ ಜುವೆಲರ್ ಆಡಳಿತ ಪಾಲುದಾರ ಲಕ್ಷ್ಮೀಕಾಂತ್ ಬಿ. ಆಚಾರ್ಯ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಶ್ರದ್ಧೆ ಹಾಗೂ ಆಸಕ್ತಿ ಮೂಡಿದಾಗ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳಿಗೆ ಪ್ರೋತ್ಸಾಹ, ಸ್ಫೂರ್ತಿ ತುಂಬುವ ಉದ್ದೇಶದಿಂದ ಉದಯವಾಣಿ ಹಾಗೂ ಆರ್ಟಿಸ್ಟ್ ಫೋರಂ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅಭಿನಂದನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನ ಕಲ್ಯ ಆಯುರ್ವೇದಂ ಚಿಕಿತ್ಸಾಲಯದ ವೈದ್ಯೆ ಡಾ| ಹರಿಣಿ ಸೂರಜ್ ಮಾತನಾಡಿ, ಚಿತ್ರಕಲೆ ಅನುಭವಿಸಿಕೊಂಡು ತೊಡಗಿಸಿಕೊಳ್ಳುವ ಕಲೆಯಾಗಿರುವುದರಿಂದ ಮನಸ್ಸಿಗೆ ಸಂತೋಷ ಲಭಿಸುತ್ತದೆ. ಮಕ್ಕಳನ್ನು ಚಟುವಟಿಕೆಯಿಂದಿರಿಸಲು ಪೂರಕವಾಗಿರುತ್ತದೆ ಎಂದು ಹೇಳಿದರು.
Advertisement
ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಮಾತನಾಡಿ, ವರ್ಣರಂಜಿತ ಬದುಕು ವಿದ್ಯಾರ್ಥಿಗಳದ್ದಾಗಬೇಕು ಎಂಬ ಉದ್ದೇಶದಿಂದ ಉದಯವಾಣಿ ಸ್ಪರ್ಧೆ ಆಯೋಜಿಸಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ ಸ್ಪರ್ಧೆಯನ್ನು ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗಿದೆ. ತಾಲೂಕು ಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ನ. 4ರಂದು ಸ್ಪರ್ಧೆ ನಡೆಯಲಿದೆ ಎಂದರು.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಸತೀಶ್ ಕುಮಾರ್ ರೈ ಶುಭಹಾರೈಸಿದರು. ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪೆರ್ಮುದೆ ಮೋಹನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯವಾಣಿ ಮ್ಯಾಗಜಿನ್ ವಿಭಾಗ ಮತ್ತು ಸ್ಪೆಷಲ್ ಇನಿಶಿಯೇಟಿವ್ಸ್ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಸ್ವಾಗತಿಸಿ, ವರದಿಗಾರ ಎನ್. ಕೆ. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಸ್ಪರ್ಧೆಯ ಸ್ಥಳೀಯ ಪ್ರಾಯೋಜಕರಾಗಿ ಜಿ. ಎಲ್. ಆಚಾರ್ಯ ಜುವೆಲರ್, ಮುಖ್ಯ ಪ್ರಾಯೋಜಕರಾಗಿ ಕ್ಯಾಂಪ್ಕೋ ಲಿ., ಹ್ಯಾಂಗ್ಯೋ ಐಸ್‌ಕ್ರೀಂ, ಮೋಡರ್ನ್ಕಿ ಚನ್ಸ್, ಮೆಡಿಮಿಕ್ಸ್ ಸಹಕರಿಸಿದರು. ವಿವಿಧ ವಿಭಾಗಗಳಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.