Advertisement

Puttur: ಗಡೀಪಾರು ಆದೇಶಕ್ಕೆ ಮಾನದಂಡವೇನು- ಸಂಸದ ನಳಿನ್‌

01:35 AM Nov 17, 2023 | Team Udayavani |

ಪುತ್ತೂರು: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿರು ವವರ ಪಟ್ಟಿಯನ್ನು ಪೊಲೀಸ್‌ ಇಲಾಖೆ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಅಲ್ಲಿಂದ ಗಡೀಪಾರಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಆಗಿಂದಾಗ್ಗೆ ನಡೆಯುತ್ತಿದ್ದು ಈ ಬಾರಿ ನೋಟಿಸ್‌ ಹೊರಡಿಸಲಾದ ಪುತ್ತೂರಿನ ನಾಲ್ವರನ್ನು ವಿನಾ ಕಾರಣಕ್ಕೆ ಗಡೀಪಾರಿನ ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

Advertisement

ಬಜರಂಗದಳ ಕಾರ್ಯಕರ್ತರ ಗಡೀಪಾರು ಆದೇಶಕ್ಕೆ ಮಾನದಂಡ ವೇನು? ಕೇವಲ ಒಂದು ಕೇಸು ಇದ್ದವರಿಗೂ ಗಡೀಪಾರು ನೋಟಿಸ್‌ ನೀಡಲಾಗಿದೆ. ಹಾಗಿದ್ದರೆ ನನ್ನನ್ನೂ ಗಡೀಪಾರು ಮಾಡಿ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಬಜರಂಗದಳದ ಐವರು ಕಾರ್ಯ ಕರ್ತರ ಗಡೀಪಾರಿಗೆ ಆದೇಶ ಬಂದ ಹಿನ್ನಲೆಯಲ್ಲಿ ಕಾರ್ಯಕರ್ತರು ಸಂಸದರನ್ನು ಭೇಟಿ ಮಾಡಿದ್ದು, ಅವರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಈ ಕುರಿತು ಮಾತನಾಡಿದರು. ಆದೇಶ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಬೇಕು. ಅದನ್ನು ಬಿಟ್ಟು ಯಾರದ್ದೋ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳಬೇಡಿ ಎಂದರು.

ಗಡೀಪಾರು ಆದೇಶ ಒಪ್ಪತಕ್ಕದ್ದಲ್ಲ: ಪೇಜಾವರ ಶ್ರೀ
ಮಂಗಳೂರು: ಹಿಂದೂ ಕಾರ್ಯಕರ್ತರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಒಪ್ಪುವಂಥದ್ದಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ಗಡೀಪಾರು ಮಾಡುವ ಕೆಲಸ ಸರಕಾರಕ್ಕೆ ಶೋಭೆ ತರುವಂಥದ್ದಲ್ಲ. ಒಂದು ಗುಂಪನ್ನು ಗುರಿ ಮಾಡಿ ಶಿಕ್ಷಿಸುವುದು ಸಮರ್ಥನೀಯವಲ್ಲ. ಇದಕ್ಕೆ ಸರಕಾರ ಉತ್ತರ ನೀಡಬೇಕು ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next