Advertisement

ಪುತ್ತೂರು: ಆಫ್ರಿಕನ್‌ ಕೊಕ್ಕರೆಗಳ ನಿಗೂಢ ಸಾವು; ಅನೇಕ ಸಂಶಯ

12:32 AM Aug 07, 2019 | Team Udayavani |

ಪುತ್ತೂರು: ನಗರದ ಕೇಂದ್ರ ಸ್ಥಾನದಲ್ಲಿರುವ ಐತಿಹಾಸಿಕ ಗಾಂಧಿ ಕಟ್ಟೆಯ ಬಳಿ ಇರುವ ಅಶ್ವತ್ಥ ಮರದಲ್ಲಿರುವ ಕೊಕ್ಕರೆಗಳು ಕೆಲವು ದಿನಗಳಿಂದ ಸತ್ತು ಬೀಳುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಹಕ್ಕಿಗಳಿಂದಾಗಿ ನಗರದ ವಾಣಿಜ್ಯ ವ್ಯವಹಾರಕ್ಕೆ ಕಿರಿಕಿರಿಯಾಗುತ್ತದೆ ಎನ್ನುವ ಕಾರಣಕ್ಕೆ ಯಾರೋ ಕಿಡಿಗೇಡಿಗಳು ಹಕ್ಕಿಗಳ ಗೂಡಿನತ್ತ ವಿಷ ಸಿಂಪಡಣೆ ಮಾಡಿದ್ದಾರೆಯೇ ಅಥವಾ ರೋಗದಿಂದಾಗಿ ಹಕ್ಕಿಗಳು ಸಾಯುತ್ತಿವೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಇದ್ದು, ಈ ಕುರಿತು ತನಿಖೆ ನಡೆಸಬೇಕೆಂದು ನಗರದ ಪಕ್ಷಿ ಪ್ರಿಯರು ಆಗ್ರಹಿಸಿದ್ದಾರೆ.

ಗೆಲ್ಲು ತೆರವಾದರೂ ವಾಸ್ತವ್ಯ
ಗಾಂಧಿಕಟ್ಟೆ, ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಪೂಜಾ ಕಟ್ಟೆ ಮತ್ತು ಅಶ್ವತ್ಥ ಮರದ ಕಟ್ಟೆ ಇಲ್ಲಿ ಒಂದೇ ಕಡೆ ಇದ್ದು, ಎಲ್ಲದಕ್ಕೂ ಅಶ್ವತ್ಥ ಮರವೇ ಆಸರೆಯಾಗಿದೆ. ಈ ಬಾರಿ ಬೇಸಗೆಯಲ್ಲಿ ಅಶ್ವತ್ಥ ಮರದ ಗೆಲ್ಲುಗಳನ್ನು ಕಡಿದು ಅಪಾಯದ ಪ್ರಮಾಣ ತಗ್ಗಿಸಲಾಗಿತ್ತು. ಪ್ರಸ್ತುತ ಗಾಂಧಿಕಟ್ಟೆ ಪುನರ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ.

ಗೆಲ್ಲುಗಳನ್ನು ಕಡಿದ ಬಳಿಕವೂ ಅಶ್ವತ್ಥ ಮರದ ಮೇಲೆ ಸುಮಾರು 30ಕ್ಕೂ ಅಧಿಕ ಕೊಕ್ಕರೆಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿವೆ. ನೀರು ಕಾಗೆ ಮತ್ತು ಕೊಕ್ಕರೆಗಳು ಅಧಿಕ ಪ್ರಮಾಣದಲ್ಲಿವೆ.

ದಶಕಗಳಿಂದ ಬರುತ್ತಿವೆ
ರೀಪ್‌ ಎಗ್ರೆಟ್ ಮತ್ತು ಎಗ್ರೆಟಾ ಗುಲಾರಿಸ್‌ ಎನ್ನುವ ಹೆಸರಿನ ಆಫ್ರಿಕಾ ಮೂಲದ ಕೊಕ್ಕರೆಗಳು ಹಲವು ದಶಕಗಳಿಂದ ಪ್ರತೀ ವರ್ಷ ಮಳೆಗಾಲದಲ್ಲಿ ಪುತ್ತೂರಿಗೆ ವಲಸೆ ಬಂದು ಇಲ್ಲಿನ ಬೃಹತ್‌ ಮರಗಳಲ್ಲಿ ಆಸರೆ ಪಡೆಯುತ್ತಿವೆ. ಇಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿ ಚಳಿಗಾಲದ ಹೊತ್ತಿಗೆ ಮರಳಿ ಹೋಗುತ್ತವೆ.

Advertisement

ಪುತ್ತೂರು, ಸುಳ್ಯ ಮತ್ತು ಕೊಡಗು ಗಡಿಭಾಗದಲ್ಲಿ ಹೇರಳವಾಗಿ ಕಂಡು ಬರುವ ಈ ಜಾತಿಯ ಕೊಕ್ಕರೆಗಳು ಈಗ ಇದ್ದಕ್ಕಿದ್ದಂತೆ ಸತ್ತು ಬೀಳುವುದಕ್ಕೆ ಕಾರಣ ಏನೆನ್ನುವುದು ನಿಗೂಢವಾಗಿದೆ. ಕೆಲವು ದಿನಗಳಿಂದ ಈ ವಿದ್ಯಮಾನ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಪಕ್ಷಿ ಶಾಸ್ತ್ರಜ್ಞರ ಮೂಲಕ ತನಿಖೆ ನಡೆದರೆ ನಿಜಾಂಶ ಹೊರಬರಬಹುದು.

ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರರಿಂದ ಕರಾವಳಿಗೆ ವಲಸೆ ಬಂದ ರೀಪ್‌ ಎಗ್ರೇಟ್ ಹಾಗೂ ಎಗ್ರೆಟಾ ಗುಲಾರಿಸ್‌ ಕೊಕ್ಕರೆಗಳು ಪುತ್ತೂರಿನ ಹೃದಯ ಭಾಗದ ಅಶ್ವತ್ಥ ಮರದ ಬಳಿ ಸಾವನ್ನಪ್ಪುತ್ತಿದ್ದು, ಮಂಗಳವಾರ ಇನ್ನೂ 3 ಕೊಕ್ಕರೆಗಳು ಸಾವಿಗಿಡಾಗಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಶ್ವಥ ಮರ ಸುತ್ತ ಸ್ಥಳ ಮಹಜರು ನಡೆಸಿ, ಮಡಿಕೇರಿ ವಿಭಾಗ ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ವಿಲೇವಾರಿಗೆ ಕ್ರಮ
ಎರಡು ದಿನಗಳಿಂದ ಅಶ್ವತ್ಥ ಕಟ್ಟೆ ಸುತ್ತಮುತ್ತ ಹಲವಾರು ಕೊಕ್ಕರೆಗಳು ಅಸುನೀಗಿದ್ದು, ಕಳೇಬರ ವಿಲೇವಾರಿಗೆ ಸ್ಥಳೀಯಾಡಳಿತ ಕ್ರಮ ಕೈಗೊಂಡಿರಲಿಲ್ಲ. ಕೊಕ್ಕರೆಗಳ ಶವಗಳು ಕೊಳೆತ ಸ್ಥಿತಿಯಲ್ಲಿದ್ದು, ಪರಿಸರ ದುರ್ನಾತ ಬೀರುತ್ತಿದೆ. ಅರಣ್ಯ ಇಲಾಖೆ ಮಹಜರು ನಡೆಸಿದ ಬಳಿಕ ಕಳೇಬರ ವಿಲೇವಾರಿಗೆ ಸೂಚಿಸಲಾಗಿದೆ. ಮಂಗಳವಾರ ರಾತ್ರಿ ಕಳೇಬರ ವಿಲೇವಾರಿ ನಡೆಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಅರೆಪ್ರಜ್ಞಾವಸ್ಥೆಯಲ್ಲಿ ಕೊಕ್ಕರೆಗಳು
ಮಂಗಳವಾರವೂ ಕೆಲವು ಕೊಕ್ಕರೆಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಕೊಕ್ಕರೆಗಳು ಅರೆಪ್ರಜ್ಞಾವಸ್ಥೆಯಲ್ಲಿವೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ನಿರಂತರ ಮಳೆ ಹಾಗೂ ಗಾಳಿ ಪರಿಣಾಮದಿಂದ ಕೊಕ್ಕರೆಗಳು ಬಿದ್ದು ಗಾಯಗೊಂಡು ಸತ್ತಿರುವ ಸಾಧ್ಯತೆ ಇದೆ.

ಸ್ಥಳ ಪರಿಶೀಲನೆ
ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರರಿಂದ ಕರಾವಳಿಗೆ ವಲಸೆ ಬಂದ ರೀಪ್‌ ಎಗ್ರೇಟ್ ಹಾಗೂ ಎಗ್ರೆಟಾ ಗುಲಾರಿಸ್‌ ಕೊಕ್ಕರೆಗಳು ಪುತ್ತೂರಿನ ಹೃದಯ ಭಾಗದ ಅಶ್ವತ್ಥ ಮರದ ಬಳಿ ಸಾವನ್ನಪ್ಪುತ್ತಿದ್ದು, ಮಂಗಳವಾರ ಇನ್ನೂ 3 ಕೊಕ್ಕರೆಗಳು ಸಾವಿಗಿಡಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಶ್ವಥ ಮರ ಸುತ್ತ ಸ್ಥಳ ಮಹಜರು ನಡೆಸಿ, ಮಡಿಕೇರಿ ವಿಭಾಗ ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ವಿಲೇವಾರಿಗೆ ಕ್ರಮ ಎರಡು ದಿನಗಳಿಂದ ಅಶ್ವತ್ಥ ಕಟ್ಟೆ ಸುತ್ತಮುತ್ತ ಹಲವಾರು ಕೊಕ್ಕರೆಗಳು ಅಸುನೀಗಿದ್ದು, ಕಳೇಬರ ವಿಲೇವಾರಿಗೆ ಸ್ಥಳೀಯಾಡಳಿತ ಕ್ರಮ ಕೈಗೊಂಡಿರಲಿಲ್ಲ. ಕೊಕ್ಕರೆಗಳ ಶವಗಳು ಕೊಳೆತ ಸ್ಥಿತಿಯಲ್ಲಿದ್ದು, ಪರಿಸರ ದುರ್ನಾತ ಬೀರುತ್ತಿದೆ. ಅರಣ್ಯ ಇಲಾಖೆ ಮಹಜರು ನಡೆಸಿದ ಬಳಿಕ ಕಳೇಬರ ವಿಲೇವಾರಿಗೆ ಸೂಚಿಸಲಾಗಿದೆ. ಮಂಗಳವಾರ ರಾತ್ರಿ ಕಳೇಬರ ವಿಲೇವಾರಿ ನಡೆಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿ ಕೊಕ್ಕರೆಗಳು ಮಂಗಳವಾರವೂ ಕೆಲವು ಕೊಕ್ಕರೆಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಕೊಕ್ಕರೆಗಳು ಅರೆಪ್ರಜ್ಞಾವಸ್ಥೆಯಲ್ಲಿವೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ನಿರಂತರ ಮಳೆ ಹಾಗೂ ಗಾಳಿ ಪರಿಣಾಮದಿಂದ ಕೊಕ್ಕರೆಗಳು ಬಿದ್ದು ಗಾಯಗೊಂಡು ಸತ್ತಿರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next