Advertisement
ತಾಲೂಕಿನಲ್ಲಿ 45 ರಿಂದ 60 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟವರು 81 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ 45ರಿಂದ 60 ವರ್ಷದೊಳಗಿನ 56,864 ಮಂದಿಯ ಪೈಕಿ 36,660 ಮಂದಿ ಮೊದಲ ಡೋಸ್ ಪಡೆದು ಕೊಂಡಿದ್ದು ಶೇ.64.47 ರಷ್ಟು ಪ್ರಗತಿ ದಾಖಲಾಗಿದೆ. 16,226 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದು ಶೇ. 44.26 ಸಾಧನೆ ದಾಖಲಾಗಿದೆ. 60 ವರ್ಷಕ್ಕಿಂತ ಮೇಲ್ಪ ಟ್ಟವರ ವಿಭಾಗದಲ್ಲಿ 27,467 ಮಂದಿಯ ಪೈಕಿ 26,509 ಮಂದಿ ಮೊದಲ ಡೋಸ್ ಪಡೆದಿದ್ದು ಶೇ.96.51 ರಷ್ಟು, 15,605 ಮಂದಿ ಎರಡನೇ ಡೋಸ್ ಪಡೆದಿದ್ದು ಶೇ. 58.87ರಷ್ಟು ಪ್ರಗತಿ ಕಂಡಿದೆ.
Related Articles
Advertisement
ಅವಿಭಜಿತ ತಾಲೂಕಿನ 1 ತಾಲೂಕು ಆಸ್ಪತ್ರೆ, 4 ಖಾಸಗಿ ಆಸ್ಪತ್ರೆ, 10 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಕೇಂದ್ರ, 1 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೇಂದ್ರವಿದ್ದು ಲಭ್ಯತೆ ಆಧಾರದಲ್ಲಿ ಲಸಿಕೆ ನೀಡಲಾಗುತ್ತಿದೆ.
ಪ್ರಗತಿ ವಿವರ :
45ರಿಂದ 60 ವರ್ಷದೊಳಗಿನ ವಿಭಾ ಗದಲ್ಲಿ ಮೊದಲ ಮತ್ತು ಎರಡನೇ ಡೋಸ್ ಪಡೆದ ತಾಲೂಕುವಾರು ಶೇಕಡವಾರು ಗಮನಿಸಿದರೆ ಸುಳ್ಯ- 58.73/45.33, ಬೆಳ್ತಂಗಡಿ- 65.36/ 37.71, ಬಂಟ್ವಾಳ- 74.48/,44.02, ಮಂಗಳೂರು- ಶೇ. 79.46/39.50 ದಾಖಲಾಗಿದೆ. 60 ವರ್ಷದ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಮತ್ತು ಎರಡನೇ ಡೋಸ್ ಪಡೆದ ತಾಲೂಕುವಾರು ಶೇಕಡವಾರು ಗಮನಿಸಿದರೆ ಸುಳ್ಯ- 93.94/60.23 ಬೆಳ್ತಂಗಡಿ-84.33/54.84 ಬಂಟ್ವಾಳ- 95.81/60.71 ಮಂಗಳೂರು- 107.89/54.58 ದಾಖಲಾಗಿದೆ.
ಲಾೖಲ ಪ್ರಸನ್ನ ಕಾಲೇಜು ಆವರಣ ಸೀಲ್‌ಡೌನ್ :
ಬೆಳ್ತಂಗಡಿ: ಕೆಲವು ದಿನಗಳಿಂದ ತಾ|ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಲಾೖಲ ಗ್ರಾ.ಪಂ.ವ್ಯಾಪ್ತಿಯ ಲ್ಲಿರುವ ಪ್ರಸನ್ನ ಕಾಲೇಜು ಹಾಸ್ಟೆಲ್‌ನ 9 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಂಕು ಪತ್ತೆಯಾದ ಎಲ್ಲ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.ಹೆಚ್ಚಾಗಿ ಹೊರರಾಜ್ಯದ ವಿದ್ಯಾರ್ಥಿ ಗಳಿದ್ದು, ಯಾವುದೇ ಹೊರ ಸಂಪರ್ಕ ವಿಲ್ಲದಿದ್ದರೂ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ, ಅಸ್ಸಾಂ ವಿದ್ಯಾರ್ಥಿಗಳಲ್ಲಿ ಸೋಂಕು ದಾಖಲಾಗಿದೆ. ಸೀಲ್ ಡೌನ್ ಮಾಡಿರುವ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ತಹಶೀಲ್ದಾರ್ ಮಹೇಶ್ ಜೆ., ಉಜಿರೆ ವೈದ್ಯಾಧಿಕಾರಿ ಅಕ್ಷತಾ, ಗ್ರಾ.ಪಂ. ಅಧಿಕಾರಿಗಳು ಮತ್ತಿತರರು ಭೇಟಿ ನೀಡಿದರು.