ಪುತ್ತೂರು: ಇಲ್ಲಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವರ ಕೆರೆಯ ಮಧ್ಯದ ದೇವರ ಕಟ್ಟೆ ಪುನರ್ ನಿರ್ಮಾಣದ ಹಿನ್ನೆಲೆಯಲ್ಲಿ ಕೆರೆಯ ಪುಷ್ಕರಣಿ ಒಳಗಿನ ನೀರನ್ನು ಖಾಲಿ ಮಾಡಿದ್ದು, ಈ ಸಂದರ್ಭದಲ್ಲಿ ಭಕ್ತರು ಕೆರೆಯ ತಳದಲ್ಲಿರುವ ಶ್ರೀ ವರುಣ ದೇವರ ಮೂರ್ತಿಯ ದರ್ಶನ ಪಡೆದು ಕಣ್ತುಂಬಿಕೊಂಡರು.
ಇದನ್ನೂ ಓದಿ:ಏಷ್ಯಾದ ಅತೀ ದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವನ; ಒಂದೇ ವಾರದಲ್ಲಿ 1 ಲಕ್ಷ ಪ್ರವಾಸಿಗರ ಭೇಟಿ
ಶ್ರೀ ವರುಣ ದೇವರ ಮೂರ್ತಿಯನ್ನು ಶುಚಿಗೊಳಿಸಿ ಪೂಜೆ ನೆರವೇರಿಸಲಾಯಿತು. ಕೆರೆಯ ಹೊಸ ಕಟ್ಟೆಯ ನವೀಕರಣದ ನಿಟ್ಟಿನಲ್ಲಿ ನೀರನ್ನು ಹೊರ ತೆಗೆಯಲಾಗಿದೆ. ಅದರಂತೆ ಸುಮಾರು 35 ವರ್ಷಗಳ ನಂತರ ಪುಷ್ಕರಣಿಯ ತಳಭಾಗದಲ್ಲಿರುವ ಶ್ರೀವರುಣ ದೇವರನ್ನು ಶುಚಿಗೊಳಿಸಿ ಪೂಜೆ ನೆರವೇರಿಸಲಾಗಿದೆ.
ಸುಮಾರು 1987ರಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕೆರೆಯಲ್ಲಿ ವರುಣನ ವಿಗ್ರಹ ಇರುವ ಬಗ್ಗೆ ತಿಳಿದು ಬಂದಿದ್ದು, ಅಂದು ಕೆರೆಯನ್ನು ಸ್ವಚ್ಚಗೊಳಿಸಿ ವರುಣ ದೇವರಿಗೆ ಪೂಜೆ ಸಲ್ಲಿಸಲಾಗಿತ್ತು. ಶೀಘ್ರದಲ್ಲೇ ನೂತನ ಪುಷ್ಕರಣೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಭಕ್ತರು ತನು, ಮನ, ಧನ ಸಹಾಯ ನೀಡಬೇಕೆಂದು ಮಹಾಲಿಂಗೇಶ್ವರ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.