Advertisement

ಪೀಠದಲ್ಲಿ ಕುಳಿತ ಧ್ವಜಮರ 

06:41 AM Mar 08, 2019 | |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿ ಮುಂಭಾಗ ಧ್ವಜಮರವನ್ನು ಗುರುವಾರ ತಂದಿರಿಸಲಾಗಿದೆ. ಮಾ. 7ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೃಹತ್‌ ಕ್ರೇನ್‌ ಸಹಾಯದಿಂದ ಧ್ವಜಮರವನ್ನು ದೇವಸ್ಥಾನದ ಒಳತರುವ ಕೆಲಸ ನಡೆಯಿತು. ಈ ಮೊದಲೇ ಧ್ವಜಮರವನ್ನು ತೈಲಾಭ್ಯಂಜನದಿಂದ ಹೊರ ತೆಗೆಯಲಾಗಿತ್ತು. ಇದಕ್ಕೆ ಕಬ್ಬಿಣದ ಪಟ್ಟಿಯನ್ನು ಬಿಗಿದಿದ್ದು, ಈ ಹಿಂದಿನಂತೆ ಮರದಲ್ಲಿ ಲೋಪ ಬಾರದಂತೆ ಇದು ತಡೆಹಿಡಿಯಲಿದೆ.

Advertisement

ಪೀಠ ಪ್ರತಿಷ್ಠೆ
ದೇವರ ಗರ್ಭಗುಡಿ ಮುಂಭಾಗದ ಜಾಗದಲ್ಲಿ ಧ್ವಜಮರ ಪೀಠ ಪ್ರತಿಷ್ಠೆ ನಡೆದಿದೆ. ಇದರ ಮೇಲೆ ಕರ್ಗಲ್ಲಿನಿಂದ ಮುಚ್ಚಿದ್ದು, ಧ್ವಜಮರ ಕುಳಿತುಕೊಳ್ಳುವಷ್ಟು ಮಾತ್ರ ಜಾಗ ಬಿಡಲಾಗಿತ್ತು. ಮಾ. 7ರಂದು ಈ ಜಾಗದಲ್ಲಿ ಧ್ವಜಮರವನ್ನು ಇಡಲಾಯಿತು. ಮಾ. 17ರಿಂದ 22ರ ತನಕ ಧ್ವಜ ಪ್ರತಿಷ್ಠೆ ನಡೆಯಲಿದೆ. ಕೊಡಿಮರಕ್ಕೆ ಸ್ವರ್ಣಲೇಪಿತ ಹೊದಿಕೆ ಅಳವಡಿಸುವ ಪೂರ್ವಸಿದ್ಧತಾ ಕಾಮಗಾರಿ ನಟರಾಜ ವೇದಿಕೆಯ ಬಳಿಯಲ್ಲಿ ನಡೆಯುತ್ತಿದೆ.

ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ, ಅರ್ಚಕ ಎ. ವಸಂತ ಕೆದಿಲಾಯ ಪೂಜೆ ನೆರವೇರಿಸಿದರು. ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಸದಸ್ಯರಾದ ಯು.ಪಿ. ರಾಮಕೃಷ್ಣ, ರೋಹಿಣಿ ಆಚಾರ್ಯ, ಜಾನುನಾಯ್ಕ, ವಾಸ್ತು ಎಂಜಿನಿಯರ್‌ ಪಿ.ಜಿ. ಜಗನ್ನಿವಾಸ್‌ ರಾವ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next