Advertisement
ದೀಪಾವಳಿ ಹಬ್ಬದ ಅಮಾವಾಸ್ಯೆ ದಿನ ದಂದು ಪ್ರತಿವರ್ಷ ದೇವರ ವಾರ್ಷಿಕ ಉತ್ಸವ ಬಲಿ ಆರಂಭವಾಗುವುದು ರೂಢಿ. ಅದರಂತೆ ಮಹಾಪೂಜೆಯ ಬಳಿಕ ಉತ್ಸವ ಬಲಿ ಆರಂಭಗೊಂಡಿತು. ಸಂಜೆ ಮಹಾಪೂಜೆ ವೇಳೆ ಶ್ರೀದೇವರ ನಡೆ ಯಲ್ಲಿ ಅವಲಕ್ಕಿ ಸಮರ್ಪಿಸ ಲಾಯಿತು. ದೇಗುಲದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಂಪ್ರದಾಯದಂತೆ ಆರಂಭದಲ್ಲಿ ಪರವೂರಿನವರಿಗೆ ಅವಲಕ್ಕಿ ಪ್ರಸಾದ ವಿತರಿ ಸಿದರು. ವಸಂತಕಟ್ಟೆಯಲ್ಲಿ ಸೀಮೆಯ ಭಕ್ತರಿಗೆ ಅವಲಕ್ಕಿ, ತೆಂಗಿನ ಕಾಯಿ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಾಲ ಯದಲ್ಲಿ ಉತ್ಸವ ಬಲಿ ಹೊರಡುವುದ ರೊಂದಿಗೆ ಸೀಮೆಯ ಎಲ್ಲ ಉತ್ಸವಗಳಿಗೆ ಚಾಲನೆ ದೊರೆಯುತ್ತದೆ. ಇಲ್ಲಿ ಉತ್ಸವ ಆರಂಭವಾದ ಬಳಿಕ ಕಾಲಾವಧಿ, ವರ್ಷಾವಧಿ, ಹರಕೆಯ, ನೇಮ, ಆಯನ, ಕೋಲ, ತಂಬಿಲಾದಿಗಳು ನಡೆಯುತ್ತವೆ. ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ನಡೆಯದೆ ಯಾವುದೇ ಕಾರಣಕ್ಕೂ ಸೀಮೆಯ ಇತರ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಜಾತ್ರೆ, ಉತ್ಸವ ನಡೆಯುವುದಿಲ್ಲ. ಇದು ಸೀಮೆಯ ಧಾರ್ಮಿಕ ಸಂಪ್ರದಾಯವಾಗಿದೆ.
Related Articles
ಪತ್ತನಾಜೆಯಂದು ಮುಚ್ಚುವ ಶ್ರೀ ದೇವಾಲಯದ ಗೋಪುರದಲ್ಲಿರುವ ಉಳ್ಳಾಲ್ತಿಯ ನಡೆಯ ಬಾಗಿಲನ್ನು ನ. 14ರಂದು ಸಂಜೆ ಶ್ರೀ ದೇವರು ಬಲಿ ಹೊರಡುವ ಮೊದಲು ತೆರೆದು ಶ್ರೀ ದೇವರ ಉತ್ಸವ ಆರಂಭವಾಗುವ ಕುರಿತು ಬ್ರಹ್ಮವಾಹಕರು ನಡೆಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವರ ಬಲಿ ಉತ್ಸವ ಆರಂಭಗೊಂಡು ಧ್ವಜಸ್ತಂಭದ ಬಳಿ ಹಾಕಲಾಗಿದ್ದ ಬಲೀಂದ್ರ ಮರಕ್ಕೆ ಪೂಜೆ ನಡೆಯಿತು.
Advertisement