Advertisement
ಮೂರು ತಾಲೂಕಿನ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ಪುತ್ತೂರು ನಗರದ ಬನ್ನೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರ್‌ಟಿಒ ವಾಹನ ನೋಂದಣಿ, ರಾಜಸ್ವ ಸಂಗ್ರಹ, ವಾಹನ ತಪಾಸಣೆ, ರಸ್ತೆ ಸುರಕ್ಷತೆ ಕಾರ್ಯಕ್ರಮಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದೆ.
ಮೂರು ತಾಲೂಕಿನಲ್ಲಿ 2020-21ರಲ್ಲಿ ವಾಹನ ನೋಂದಣಿ ವಿಭಾಗದಲ್ಲಿ 297 ಗೂಡ್ಸ್ ವಾಹನಗಳು, 489 ರಿಕ್ಷಾಗಳು ಸೇರಿ ದಂತೆ 856 ಸಾರಿಗೆ ವಾಹನಗಳು ಹೊಸ ದಾಗಿ ನೋಂದಣಿಯಾಗಿವೆ. ಸಾರಿಗೇತರ ವಿಭಾಗದಲ್ಲಿ 7,425 ದ್ವಿಚಕ್ರ ವಾಹನಗಳು, 2,022 ಕಾರುಗಳು ಸೇರಿ 9,510 ವಾಹನಗಳು ನೋಂದಣಿಯಾಗಿವೆ. ಕಾಯಿದೆ ಉಲ್ಲಂಘನೆ 1884 ಪ್ರಕರಣ ದಾಖಲು
2020-21ನೇ ಸಾಲಿನಲ್ಲಿ ವಾಹನಗಳ ವಿವಿಧ ಕಾಯಿದೆ ನಿಯಮ ಉಲ್ಲಂಘನೆಗಾಗಿ 1884 ಪ್ರಕರಣ ದಾಖಲಿಸುವ ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ 1,785 ಪ್ರಕರಣ ದಾಖಲಿಸಿ ಎಚ್ಚರಿಕೆಯ ಜತೆಗೆ ದಂಡ ವಿಧಿಸಲಾಗಿದೆ. ದಂಡದ ಒಟ್ಟು ಮೊತ್ತ 23,65, 769 ರೂ. ಆಗಿದ್ದು, 15,13,600 ರೂ.ವಸೂಲಾತಿ ದಂಡದ ಮೊತ್ತವಾಗಿದೆ. 85,169 ರೂ.ಬಾಕಿ ತೆರಿಗೆ ಮೊತ್ತ. 1.09 ಕೋ.ರೂ. ಬಾಕಿ ತೆರಿಗೆ ವಸೂ ಲಾತಿಗೆ ಸಂಬಂಧಪಟ್ಟಂತೆ 65 ವಾಹನ ಮಾಲ ಕರ ಮೇಲೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
Related Articles
Advertisement
ಹೆಲ್ಮೆಟ್ ರಹಿತ ಚಾಲನೆ: ದಂಡ2021 ಮಾರ್ಚ್ 31ರೊಳಗೆ ವಾಹನ ಚಾಲನೆ ಮಾಡುವಾಗ ಕಾಯಿದೆ ನಿಯಮ ಉಲ್ಲಂಘನೆ ಅಪರಾಧಕ್ಕಾಗಿ ವಾಹನ ಚಾಲಕರ ಡ್ರೈವಿಂಗ್ ಲೈಸನ್ಸ್ ಅಮಾನತುಪಡಿಸುವ ಮೂಲಕ ಅಪಘಾತ ಪ್ರಕರಣ ನಿಯಂತ್ರಣದ ಎಚ್ಚರಿಕೆ ನೀಡಲಾಗಿದೆ. ಅತಿ ವೇಗವಾಗಿ ವಾಹನ ಚಲಾಯಿಸಿದ 12 ವಾಹನ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಸಿದ 12 ವಾಹನ ಸವಾರರು, ವಾಹನ ಅಪಘಾತ ಪ್ರಕರಣ 19, ಹೆಲ್ಮೆಟ್ ಧರಿಸದೆ ವಾಹನ ಚಾಲನೆ 9 ಪ್ರಕರಣ ದಾಖಲಿಸಿ ಅವರಿಂದ ದಂಡ ವಸೂಲಾತಿ ಮಾಡಲಾಗಿದೆ. ರಸ್ತೆ ಸುರಕ್ಷತೆಗೆ ಆದ್ಯತೆ
ಆರ್‌ಟಿಒ ಮೂರು ತಾಲೂಕು ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ರಸ್ತೆ ಸುರಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಸಿದ್ದು ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನ ನಡೆಸಲಾಗಿದೆ. ಜತೆಗೆ ನಿಗದಿಪಡಿಸಿದ ಗುರಿಗೆ ತಕ್ಕಂತೆ ಸಾಧನೆ ತೋರಲಾಗಿದೆ.
-ಆನಂದ ಗೌಡ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಆರ್‌ಟಿಒ, ಬನ್ನೂರು