ಪುತ್ತೂರು: ಪುತ್ತೂರಿನಲ್ಲಿ ಹಣ್ಣಡಕೆಯ ಸಾರವನ್ನು ಬಳಸಿ ತಯಾರಿಸಿರುವ ಸಾಬೂನಿಗೆ ಪೇಟೆಂಟ್ ದೊರೆತಿದೆ.
ಕೆದಿಲ ಹಾರ್ದಿಕ್ ಹರ್ಬಲ್ಸ್ ಸತ್ವಮ್ ಕೊಕೋರೇಕಾ ಹರ್ಬಲ್ ಬಾತಿಂಗ್ ಸೋಪ್‌ಗೆ ಕೇಂದ್ರ ಸರಕಾರದಿಂದ ಪೇಟೆಂಟ್ ಲಭಿಸಿದೆ. 2021 ನವೆಂಬರ್‌ನಲ್ಲಿ ಪ್ರಕ್ರಿಯೆ ಆರಂಭಿಸಿ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದು ಈಗ ಅಧಿಕೃತವಾಗಿ ಹಕ್ಕುಸ್ವಾಮ್ಯ ಲಭಿಸಿದೆ. ತನ್ಮೂಲಕ ಅಡಿಕೆಯಲ್ಲಿ ಔಷಧ ಗುಣ ಇದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಕೋವಿಡ್ ಸಮಯದಲ್ಲಿ ಅಡಿಕೆ ವಿಷಯದಲ್ಲಿ ಸಂಶೋಧನೆಗೆ ಮುಂದಾಗಿದ್ದೆವು. ಬೆವರಿನ ತುರಿಕೆಗೆ ಹಣ್ಣಡಕೆಯ ರಸವನ್ನು ಹಚ್ಚುತ್ತಿದ್ದದನ್ನು ಕಂಡು ಇದನ್ನು ಸಾಬೂನಾಗಿ ಪರಿವರ್ತಿಸುವ ಯೋಚನೆ ಮೂಡಿತ್ತು.
ಬದನಾಜೆ ಶಂಕರ ಭಟ್, ಡಾ| ಶ್ರೀ ಕುಮಾರ್ ಈಶ್ವರಮಂಗಲ ಮೊದಲಾದವರ ಮಾರ್ಗದರ್ಶನ ಪಡೆದು ಹಣ್ಣಡಿಕೆಯ ಸಿಪ್ಪೆಯ ರಸವನ್ನು ಬಳಸಿ ಮೂರು ವರ್ಷಗಳಿಂದ ಸಾಬೂನು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಹಾರ್ದಿಕ್ ಹರ್ಬಲ್ಸ್‌ನ ಸಿಇಒ ಮುರಳೀಧರ ಕೆ.