Advertisement

ಪುತ್ತೂರು: 58.98 ಲಕ್ಷ ರೂ. ಮಿಗತೆ ಬಜೆಟ್ 

06:02 AM Feb 23, 2019 | Team Udayavani |

ಪುತ್ತೂರು: ಸ್ಥಳೀಯಾಡಳಿತಕ್ಕೆ ಇನ್ನೂ ಆಡಳಿತ ನೇಮಕವಾಗದ ಹಿನ್ನೆಲೆಯಲ್ಲಿ ಫೆ. 22ರಂದು ಅಧಿಕಾರಿಗಳು ಬಜೆಟ್‌ ಮಂಡಿಸಿದರು. ಪುತ್ತೂರು ನಗರಸಭೆ ಈ ಬಾರಿ 58.98 ಲಕ್ಷ ರೂ. ಮಿಗತೆ ಬಜೆಟ್‌ ಅನ್ನು ಮಂಡಿಸಿದೆ.

Advertisement

ಶುಕ್ರವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಬಜೆಟ್‌ ಮಂಡಿಸಿದರು. ಈ ಬಾರಿ ಆಡಳಿತ ಇಲ್ಲದೇ ಇರುವುದರಿಂದ, ಬಜೆಟ್‌ಗೆ ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲಾಗಿತ್ತು. ಲೆಕ್ಕ ಅಧೀಕ್ಷಕ ಸಿ.ಆರ್‌. ದೇವಾಡಿಗ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅರುಣ್‌ ಉಪಸ್ಥಿತರಿದ್ದರು.

2019-20ನೇ ಸಾಲಿನಲ್ಲಿ ಒಟ್ಟು 41.87 ಕೋಟಿ ರೂ. ಆದಾಯ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ. ಇದರಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ 41.29 ಕೋಟಿ ರೂ. ಮೀಸಲಿಡಲಾಗಿದೆ. 58.98 ಲಕ್ಷ ರೂ. ಮಿಗತೆ ಬಜೆಟ್‌ ಆಗಿದೆ. 12.48 ಕೋಟಿ ರೂ. ಸ್ವಂತ ಆದಾಯ ನಿರೀಕ್ಷಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 17.30 ಕೋಟಿ ರೂ. ಅನುದಾನ ಬರಲಿದೆ. 2019-20ನೇ ಸಾಲಿನಲ್ಲಿ ಸ್ವಂತ ಆದಾಯದ ವಿವರವನ್ನು ನೀಡಲಾಯಿತು. ವರ್ಷದಲ್ಲಿ 3.50 ಕೋಟಿ ರೂ. ಆಸ್ತಿ ತೆರಿಗೆಯಿಂದ ಬರಲಿದೆ. ಕುಡಿಯುವ ನೀರಿನ ಶುಲ್ಕವಾಗಿ 3.10 ಕೋಟಿ ರೂ., ನೀರಿನ ನಳ್ಳಿ ಸಂಪರ್ಕದಲ್ಲಿ 15 ಲಕ್ಷ ರೂ., ಕಟ್ಟಡ ಹಾಗೂ ಉದ್ಯಮ ಪರವಾನಿಗೆಯಿಂದ 15 ಲಕ್ಷ ರೂ., ಕರ ಸಂಗ್ರಹಣೆಯಿಂದ 9.10 ಲಕ್ಷ ರೂ., ಖಾತೆ ಬದಲಾವಣೆ, ಜನನ ಮರಣ ಪ್ರತಿ ನೀಡಿಕೆಯಿಂದ 25 ಲಕ್ಷ ರೂ., ಆಸ್ತಿ ತೆರಿಗೆ ಹಾಗೂ ಉದ್ಯಮ ಪರವಾನಿಗೆಗಳಿಗೆ ವಿಧಿಸುವ ದಂಡನೆಯಿಂದ 45.25 ಲಕ್ಷ ರೂ., ನವೀಕರಣಗೊಂಡ ಪುರಭವನದಿಂದ 10 ಲಕ್ಷ ರೂ. ಆದಾಯ ನಗರಸಭೆಗೆ ಬರಲಿದೆ. ಹೀಗೆ ಒಟ್ಟು 12.48 ಕೋಟಿ ರೂ. ಸ್ವಂತ ಆದಾಯ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 17.30 ಕೋಟಿ ರೂ. ಅನುದಾನ ಬರಲಿದೆ. ಒಟ್ಟು ಇತರೆ ಹೊಂದಾಣಿಕೆ ಮೊತ್ತ ಸೇರಿ 41.87 ಕೋಟಿ ರೂ. ಮೊತ್ತ ನಗರಸಭೆಗೆ ಬರಲಿದೆ.

41.29 ಕೋಟಿ ರೂ. ಹಂಚಿಕೆ
ನಗರಸಭೆಯ ಪ್ರತಿ ವಾರ್ಡ್‌ಗಳಿಗೆ ತಲಾ 10 ಲಕ್ಷ ರೂ., ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ. 24.10ರ ನಿಧಿಯಡಿ 3.10 ಲಕ್ಷ ರೂ., ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ ಕುಟುಂಬಗಳಿಗೆ ಶೇ. 7.25ರ ನಿಧಿಯಡಿ ಸಹಾಯಧನ ಒದಗಿಸಲು 33.54 ಲಕ್ಷ ರೂ., ಭಿನ್ನ ಸಾಮರ್ಥ್ಯ ಹೊಂದಿದವರಿಗೆ ಶೇ. 5 ನಿಧಿಯಲ್ಲಿ 23.13 ಲಕ್ಷ ರೂ., ಕಚೇರಿ ಆಡಳಿತ ವ್ಯವಸ್ಥೆ ಸಾರ್ವಜನಿಕರಿಗೆ ತ್ವರಿತಗೊಳಿಸುವ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಗಾಗಿ 15 ಲಕ್ಷ ರೂ., ನಗರಸಭೆ ಕಟ್ಟಡಗಳಿಗಾಗಿ 75 ಲಕ್ಷ ರೂ., ನಗರಸಭೆಗೆ ಹೊಸ ವಾಹನಗಳ ಖರೀದಿಗಾಗಿ 90 ಲಕ್ಷ ರೂ., ದಾರಿದೀಪ, ಪ್ರತಿ ವಾರ್ಡ್‌ಗೆ ನೀರು ಸರಬರಾಜು, ಹೊರಗುತ್ತಿಗೆ ನಿರ್ವಹಣೆಗೆ, ನಲ್ಮ್ ಯೋಜನೆಯಡಿ ಸಾಲ ಹಾಗೂ ಸಹಾಯಧನ, ಹೊಸ ವಾಹನ ಖರೀದಿಗೆ ಇನ್ನಿತರ ಸೌಲಭ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪೌರಾಯುಕ್ತೆ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next