Advertisement

Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ

07:57 AM Nov 04, 2024 | Team Udayavani |

ಪುತ್ತೂರು: ಇಪ್ಪತ್ತೈದು ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿದ್ದ ಮಹಿಳೆಯ ತಲೆ ಬುರುಡೆ ಹಾಗೂ ಎಲುಬು ಪತಿ ಮನೆಯ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಸಂಶಯ ಮೂಡಿದೆ.

Advertisement

ಒಳಮೊಗ್ರು ಗ್ರಾಮದ ಉರ್ವ ನಿವಾಸಿ ಸಂಜೀವ ಅವರ ಪತ್ನಿ ನಳಿನಿ (32) ಮೃತಪಟ್ಟವರು. ಅವರು ವಿಟ್ಲ ಸಮೀಪದ ಕನ್ಯಾನದವರು. ಒಂದೂವರೆ ವರ್ಷದ ಹಿಂದೆ ಸಾಮೂಹಿಕ ವಿವಾಹದಲ್ಲಿ ಸಂಜೀವರ ಜತೆ ವಿವಾಹವಾಗಿತ್ತು.

ನಾಪತ್ತೆ ಪ್ರಕರಣ
ಅ.8ರಂದು ಸಂಜೀವ ಅವರು ಪತ್ನಿ ನಾಪತ್ತೆಯಾಗಿದ್ದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪತ್ನಿಯ ಫೋಟೋ ನೀಡು ವಂತೆ ಪೊಲೀಸರು ತಿಳಿಸಿದ್ದು, ತರುವುದಾಗಿ ಹೇಳಿ ಹೋಗಿದ್ದ ಸಂಜೀವ ಮತ್ತೆ ಠಾಣೆಗೆ ಬಂದಿರಲಿಲ್ಲ ಎನ್ನಲಾಗಿದೆ.

ವಿವಾಹದ ಬಳಿಕ ನಳಿನಿ ಆಗಾಗ ತವರು ಮನೆಗೆ ಹೋಗುತ್ತಿದ್ದುದರಿಂದ, ಈ ಬಾರಿ ಆಕೆ ಕಾಣದಿದ್ದಾಗಲೂ ಸಂಜೀವ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಸಂಜೀವ ವಿಪರೀತ ಕುಡಿತದ ಚಟ ಹೊಂದಿದ್ದು, ಇಬ್ನರ ನಡುವೆ ಆಗಾಗೆ ಜಗಳ ಉಂಟಾಗುತಿತ್ತು.

ತವರು ಮನೆಯಿಂದ ಹುಡುಕಿಕೊಂಡು ಬಂದಿದ್ದರು
ಹಲವು ದಿನಗಳಿಂದ ನಳಿನಿ ತವರು ಮನೆಯವರ ಸಂಪರ್ಕಕ್ಕೆ ಸಿಗದೆ ಇರುವ ಕಾರಣದಿಂದ ನ. 2ರಂದು ಆಕೆಯನ್ನು ಹುಡುಕಿಕೊಂಡು ಉರ್ವದ ಮನೆಗೆ ಬಂದಿದ್ದರು. ಆಗ ಆಕೆ ನಾಪತ್ತೆ ಆಗಿರುವ ಸಂಗತಿ ತಿಳಿಯಿತು. ಹೀಗಾಗಿ ಹುಡುಕಾಡಿದಾಗ ಗುಡ್ಡದ ತುದಿಯಲ್ಲಿ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಪತ್ತೆಯಾಗಿದ್ದು, ಅದರಲ್ಲಿ ತಲೆ ಕೂದಲು ಪತ್ತೆಯಾಗಿದೆ. ಹಗ್ಗದ ಕೆಳಗೆ ತಲೆ ಬುರುಡೆ ಹಾಗೂ ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿವೆ. ಇದು ನಳಿನಿ ಅವರದ್ದೆಂಬುದು ದೃಢಪಟ್ಟಿದೆ.

Advertisement

ಅವಶೇಷಗಳನ್ನು ಗಮನಿಸಿದಾಗ, ಸಾವು ಸಂಭವಿಸಿ ಒಂದು ತಿಂಗಳು ಕಳೆದಿರಬಹುದೆಂದು ಊಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಹಿಳೆಯ ದೇಹವನ್ನು ಪ್ರಾಣಿಗಳು ತಿಂದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ನಳಿನಿ ಸಾವು ಆತ್ಮಹತ್ಯೆಯೋ, ಅಥವಾ ಕೊಲೆಯೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next