Advertisement
ಪುತ್ತೂರು ತಾಲೂಕು ನಾಡಹಬ್ಬಗಳ ಆಚರಣ ಸಮಿತಿಯ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ಸಂಸ್ಮರಣ ಉಪನ್ಯಾಸ ನೀಡಿದರು.
ಮಡಿವಾಳ ಮಾಚಿದೇವ ಅವರು ವೃತ್ತಿಯನ್ನು ಪಾಲಿಸಿಕೊಂಡು ಶರಣರ ಬಟ್ಟೆಗಳನ್ನು ಶುಚಿ ಮಾಡುವುದಕ್ಕಿಂತ ವಚನ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿದ್ದು ಅತ್ಯಂತ ಮಹತ್ವದ ವಿಚಾರ. ಸಾಮಾಜಿಕ ಸಮಸ್ಯೆಗಳನ್ನು ತಮ್ಮ 400ಕ್ಕೂ ಹೆಚ್ಚು ತೀಕ್ಷ್ಣ ವಚನ ಸಾಹಿತ್ಯದ ಮೂಲಕ ಹೋಗಲಾಡಿ ಸುವ ಪ್ರಯತ್ನ ನಡೆಸಿರುವುದು ಆ ಕಾಲಕ್ಕೆ ಮಾದರಿ. ಆದರೆ ಉಳಿದ ವಚನಕಾರರಂತೆ ಮಾಚಿದೇವರ ವಚನಗಳು ವಿಮರ್ಶೆಗೆ ಒಳಗಾಗದೇ ಇರುವುದು ಬೇಸರದ ವಿಚಾರ ಎಂದರು.
Related Articles
ವಚನ ಸಾಹಿತ್ಯವನ್ನು ಉಳಿಸುವಲ್ಲಿಯೂ ಅಗತ್ಯ ಸೇವೆ ಸಲ್ಲಿಸಿದವರು ಮಾಚಿದೇವ. ವಚನ ಸಾಹಿತ್ಯ ನಾಶಕ್ಕೆ ಹೊರಟವರ ವಿರುದ್ಧ ಯೋಧನಾಗಿ ಹೋರಾಟ ಮಾಡಿದವರು ಅವರು ಎಂದು ಹೇಳಿದ ಬಿ.ವಿ. ಸೂರ್ಯನಾರಾಯಣ, ತಾವು ಶಿವಶರಣರಾಗಿದ್ದು, ತಪ್ಪಿ ನಡೆವ ಶಿವಶರಣರ ವಿರುದ್ಧ ವೈಚಾರಿಕ ಟೀಕೆಗಳನ್ನು ಮಾಡಿದವರು. ಸ್ವತಃ ಗುರು ಬಸವಣ್ಣರು ತಪ್ಪು ಮಾಡಿದಾಗಲೂ ವಿರೋಧಿಸಿದವರು. ಇದು ಪ್ರಜಾಪ್ರಭುತ್ವ ಮಾದರಿಯಲ್ಲಿ ಧರ್ಮ ಕಟ್ಟುವ ಕಾರ್ಯ ಆಗಲೂ ನಡೆಯುತ್ತಿತ್ತು ಎನ್ನುವುದಕ್ಕೆ ಉದಾಹರಣೆ ಎಂದು ಅಭಿಪ್ರಾಯಪಟ್ಟರು.
Advertisement
ತಾ.ಪಂ. ಇಒ ಜಗದೀಶ್ ಎಸ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ, ಮಡಿವಾಳ ಸಮುದಾ ಯದ ಪ್ರಮುಖರು, ತಾಲೂಕು ಕಚೇರಿ ಸಿಬಂದಿ ವರ್ಗದವರು ಪಾಲ್ಗೊಂಡರು.
ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಸ್ವಾಗತಿಸಿ, ತಾಲೂಕು ಕಚೇರಿ ಸಿಬಂದಿ ದಯಾನಂದ ಕಾರ್ಯ ಕ್ರಮ ನಿರ್ವಹಿಸಿದರು.
ಸರಕಾರಕ್ಕೆ ಅಭಿನಂದನೆಮಡಿವಾಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಮಾತನಾಡಿ, ಕಳೆದ ವರ್ಷ ದಿಂದ ಸರಕಾರ ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಬದುಕಿಗೆ ನ್ಯಾಯ ನೀಡಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.