ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ ಶ್ರೀ ದೇವರ ಅವಭೃಥ ಸವಾರಿ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಾವಿರಾರು ಭಕ್ತರೊಂದಿಗೆ ತೆರಳಿತು.
ಶ್ರೀ ದೇವರು ಅಲ್ಲಲ್ಲಿ ಭಕ್ತರಿಂದ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ.19 ರಂದು ಮುಂಜಾನೆ ವೀರಮಂಗಲ ನದಿ ತಟಕ್ಕೆ ತಲುಪಲಿದ್ದು ಅಲ್ಲಿ ಅವಭೃಥ ಸ್ನಾನ ನೆರವೇರಲಿದೆ. ಸುಮಾರು 18 ಗಂಟೆಗಳ ತನಕ ನಡಿಗೆಯಲ್ಲೇ ಕಟ್ಟೆಪೂಜೆ ಸ್ವೀಕರಿಸುತ್ತಾ ಅವಭೃಥ ಸ್ನಾನ ಮುಗಿಸಿ ದೇವರು ದೇವಾಲಯಕ್ಕೆ ಮರಳಿ ಬರುವುದು ಇಲ್ಲಿನ ವಿಶೇಷ.
ಬ್ರಹ್ಮರಥೋತ್ಸವದ ಬಳಿಕ
ಬುಧವಾರ ರಾತ್ರಿ ಶ್ರೀ ದೇವರ ರಥೋತ್ಸವ ಆದ ಅನಂತರ ಶ್ರೀ ದೇವರ ಬಂಗಾರ್ ಕಾಯರ್‌ಕಟ್ಟೆ ಸವಾರಿ ನಡೆದು ಶ್ರೀ ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡುವ ಕಾರ್ಯ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಿತು. ಅನಂತರ ಭೂತ ಬಲಿ ನಡೆದು ಶ್ರೀ ದೇವರ ಶಯನ ನೆರವೇರಿತು.
ಕಟ್ಟೆ ಪೂಜೆ
ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಕಟ್ಟೆ, ಗಾಂಧಿ ಕಟ್ಟೆ, ಸಿಟಿ ಹಾಸ್ಪಿಟಲ್ ಕಟ್ಟೆ, ಅರುಣಾ ಚಿತ್ರಮಂದಿರದ ವಠಾರದ ಕಟ್ಟೆ, ವಾಸುದೇವ್ ನಾಯಕ್ ನಿರ್ಮಿಸಿದ ಕಟ್ಟೆ, ಕೆನರಾ ಬ್ಯಾಂಕ್ ಎದುರಿನ ಕಟ್ಟೆ, ಯೆಳ್ತಿಮಾರ್ ಬಾಬಣ್ಣ ಶೆಣೈ ಅವರ ಕಟ್ಟೆ, ದಾಮೋದರ ಶೆಣೈ ಅವರ ಕಟ್ಟೆ, ಏಳು¾ಡಿ ನಾಗಪ್ಪ ಪೂಜಾರಿಯವರ ಕಟ್ಟೆ, ಕಲ್ಲಾರೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ರಾಘವೇಂದ್ರ ಮಠ, ಜೆ.ಕೆ. ಕಾಂಪ್ಲೆಕ್ ಕಟ್ಟೆ, ಕಲ್ಲಾರೆ ಆಳ್ವ ಗ್ಯಾರೇಜ್ ಕಟ್ಟೆ, ಧನ್ವಂತರಿ ಆಸ್ಪತ್ರೆಯ ವಠಾರದ ಕಟ್ಟೆ, ಕೆ.ಕೆ. ಶೆಣೈ ಕಾಂಪೌಂಡ್ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಡಾಲ್ಫಿ ರೇಗೋ ವಠಾರದ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಭಕ್ತವೃಂದ ಸಾರ್ವಜನಿಕ ಕಟ್ಟೆ, ದರ್ಬೆ ವೃತ್ತದ ಬಳಿಯ ಕಟ್ಟೆ, ಗೋಪಾಲ ಪೈ ಕಟ್ಟೆ, ದಿ. ಮಹಾಲಿಂಗ ಪೈ ಕಟ್ಟೆ, ದರ್ಬೆ ಕಾವೇರಿಕಟ್ಟೆ, ಮುರಳಿ ಮೋಹನ ಶೆಟ್ಟಿಯವರ ವಠಾರದ ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಟ್ಟೆ, ಕೂರ್ನಡ್ಕ ಅಣ್ಣಪ್ಪ ಕಟ್ಟೆ, ಲಾರ್x ಮಹಾಲಿಂಗೇಶ್ವರ ಪೀಠಂ ಟ್ರಸ್ಟ್ ಕ್ಯಾಂಪ್ಕೋ ವಠಾರದ ಕಟ್ಟೆ, ಕೃಷ್ಣಯ್ಯ ಮಾಸ್ಟರ್ ವಠಾರದ ಕಟ್ಟೆ, ಮರೀಲ್ ಮಹಾಲಿಂಗೇಶ್ವರ ಕಟ್ಟೆ, ಮರೀಲ್ ಸಾರ್ವಜನಿಕ ಕಟ್ಟೆ, ಮಹಾಲಿಂಗೇಶ್ವರ ಭಟ್ ವಠಾರದ ಕಟ್ಟೆ, ಬೆದ್ರಾಳ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಶ್ರೀ ನಂದಿಕೇಶ್ವರ ಕಟ್ಟೆ, ದೇವರಕಟ್ಟೆ ಬೆದ್ರಾಳ, ಮುಕ್ವೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ಪಿ. ಗಣಪತಿ ಭಟ್ ಕಟ್ಟೆ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಪದ್ಮಾವತಿ ಅಮ್ಮ ಕಟ್ಟೆ, ಪಾದೆ ಕಟ್ಟೆ, ಪುತ್ತೂರಾಯ ಕಟ್ಟೆ, ನರಿಮೊಗರು ಕಾಳಿಂಗಹಿತ್ಲು ಕಟ್ಟೆ, ದುಬ್ರಾಯ ಹೆಬ್ಟಾರ್ ಅವರ ಕಟ್ಟೆ, ಕೆರೆಮನೆ ಕಟ್ಟೆ, ಕೊಡಿನೀರು ಸಾರ್ವಜನಿಕ ಅಶ್ವತ್ಥ ಕಟ್ಟೆ, ಅತಿಶಯ ಕ್ಷೇತ್ರ ಕೈಪಂಗಳ ಕಟ್ಟೆ, ಪುತ್ತೂರು ಸಾವಂತ ಕಟ್ಟೆ, ಆನಾಜೆ ಹೆಬ್ಟಾರರ ಕಟ್ಟೆ, ವೀರಮಂಗಲ ಆನಾಜೆ ಸಾರ್ವಜನಿಕ ಕಟ್ಟೆ, ವೀರಮಂಗಲ ಗುತ್ತು, ವೀರಮಂಗಲ ದೇವಸ್ಥಾನ, ನದಿ ಕಿನಾರೆ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಅವಭೃಥಕ್ಕೆ ಸಾಗುವ ದಾರಿಯುದ್ದಕ್ಕೂ ಭಕ್ತರು ಅಲ್ಲಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದರು. ಕಟ್ಟೆಗಳ ಶೃಂಗಾರ ಮಾಡಿದ್ದರು. ವಿವಿಧ ಕಟ್ಟೆಗಳಲ್ಲಿ ಶ್ರೀ ದೇವರಿಗೆ ಪೂಜೆ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತುಲಾಭಾರ ಸೇವೆ
ಎ. 18ರಂದು ಬೆಳಗ್ಗೆ ತುಲಾಭಾರ ಸೇವೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾದ ಹರಕೆ ಹೊತ್ತ ಭಕ್ತರು ತುಲಾಭಾರ ಸೇವೆ ಮಾಡಿಸಿದರು. ಅಕ್ಕಿ, ತೆಂಗಿನ ಕಾಯಿ, ಸಕ್ಕರೆ, ಬಾಳೆಗೊನೆ, ಸೀಯಾಳ, ತುಪ್ಪ, ಎಣ್ಣೆ ಮೊದಲಾದವುಗಳಲ್ಲಿ ತುಲಾಭಾರ ಸೇವೆ ಸಮರ್ಪಿಸಲಾಯಿತು.
ದೇವಾಲಯದಲ್ಲಿ ಇಂದು
ಎ.19 ರಂದು ಅವಭೃಥ ಸ್ನಾನದ ಬಳಿಕ ಶ್ರೀ ದೇವರು ಮರಳಿ ಬಂದು ದೇವಾಲಯದಲ್ಲಿ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ನಡೆದು ಪಿಲಿಭೂತ, ರಕ್ತೇಶ್ವರಿ ನೇಮ ಜರಗಲಿದೆ.
ದೈವ-ದೇವರ ಭೇಟಿ: ಎ.18 ರಂದು ಅಪರಾಹ್ನ ದೇವಾಲಯದ ದೈವಗಳಾದ ಪಿಲಿಭೂತ, ಕಾಜುಕುಜುಂಬ ಅಂಙಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲಿನ ಬಳಿಯಿಂದ ಬೀಳ್ಕೊಡುವ ಪದ್ಧತಿ ನಡೆಯಿತು. ಬಳಿಕ ಶ್ರೀ ದೇವರು ನಗರದ ರಾಜ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಭಕ್ತರಿಂದ ಪೂಜೆ ಸ್ವೀಕರಿಸುತ್ತಾ ವೀರಮಂಗಲ ಕುಮಾರಧಾರ ನದಿತಟಕ್ಕೆ ಅವಭೃಥಕ್ಕೆ ತೆರಳಿದರು.