Advertisement

ಪುತ್ತೂರು: ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ: ಘಟನೆ ಬಗ್ಗೆ ಪೊಲೀಸರ ಸ್ಪಷ್ಟನೆ

01:01 PM Jun 03, 2022 | Team Udayavani |

ಪುತ್ತೂರು:  ಕಬಕದ ಕೊಡಿಪ್ಪಾಡಿಯಲ್ಲಿ ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಹಿಂದೂ ಯುವಕನೊರ್ವನಿದ್ದಾನೆ ಎಂದು  ಎರಡೂ ಕೋಮಿನ ಜನ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಆದರೆ ಪೊಲೀಸ್ ಇಲಾಖೆ ಇಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

Advertisement

ಕಬಕ ಸಮೀಪದ ಮನೆಯೊಂದರ ಮುಂಬಾಗಿಲಿಗೆ ಬೀಗ ಹಾಕಲಾಗಿತ್ತು. ಮನೆಯೊಳಗೆ ಅಟೋ ಚಾಲಕ ಯುವಕನೋರ್ವ ಇದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಮನೆಯ ಸುತ್ತ ನೂರಾರು ಮಂದಿ ಜಮಾಯಿಸುತ್ತಿದ್ದಂತೆಯೇ ನಗರ ಪೊಲೀಸರಿಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಿದ್ದಾರೆ ಎನ್ನುವ ಅಂಶ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಲವ್ ಜಿಹಾದ್ ಪ್ರಕರಣ: ಹಿಂದೂಯೇತರರ ವಾಹನಕ್ಕೆ ನಿಷೇಧ ಹೇರಿ ಸೌತಡ್ಕದಲ್ಲಿ ಫ್ಲೆಕ್ಸ್ ಅಳವಡಿಕೆ

ಪೊಲೀಸರು ಮನೆಯ ಸುತ್ತ ಪರಿಶೀಲನೆ ನಡೆಸುವ ವೇಳೆ ಹಿಂಬಾಗಿಲಿನ ಬಾಗಿಲು ತೆರೆಯಲಾಗಿತ್ತು. ಜನ ಸೇರುವುದನ್ನು ಕಂಡ ಇವರಿಬ್ಬರು ಹಿಂಬಾಗಿಲಿನ ಮೂಲಕ ತಪ್ಪಿಸಿಕೊಂಡಿದ್ದು, ಯಾರಿಗೂ ಗೊತ್ತಾಗಿರಲಿಲ್ಲ ಎಂಬ ಬಗ್ಗೆಯು ಮಾಹಿತಿ ಹಬ್ಬಿತ್ತು. ಆದರೆ ನಗರ ಠಾಣೆಯನ್ನು ಸಂಪರ್ಕಿಸಿದಾಗ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next