Advertisement

ಹಾವಿನ ಕುರಿತ ಕತೆ, ಕಲ್ಪನೆ ವೈಚಾರಿಕ ಹಾದಿಯಲ್ಲಿ ಗ್ರಹಿಸಿ

03:20 PM Nov 18, 2018 | |

ನೆಹರೂನಗರ: ನಾಗರಿಕತೆಯ ವಿವಿಧ ಮಜಲುಗಳಲ್ಲಿ ಹಾವಿನಂತಹ ಜೀವಿ ಜನಾಂಗದ ಪ್ರತೀಕವಾಗಿ, ದೇವರ ರೂಪದಲ್ಲಿ ಪೂಜೆಗೆ ಅರ್ಹವಾಗಿದೆ. ಹಾವಿನ ಬಗ್ಗೆ ರೋಚಕ ಕತೆಗಳು, ಪುರಾಣಗಳು, ಕಲ್ಪನೆಗಳು, ಮೂಢನಂಬಿಕೆಗಳು ಪ್ರಪಂಚದೆಲ್ಲೆಡೆ ಕಾಣಸಿಗುತ್ತವೆ. ಅವುಗಳನ್ನು ನಾವು ವಿಜ್ಞಾನ ಮತ್ತು ವೈಚಾರಿಕತೆಯ ಹಾದಿಯಲ್ಲಿ ಗ್ರಹಿಸಬೇಕು ಎಂದು ಶೇಷವನ ಚಾರಿಟೆಬಲ್‌ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ| ರವೀಂದ್ರನಾಥ ಐತಾಳ್‌ ಹೇಳಿದರು.

Advertisement

ಕನಸುಗಳು 2018 ಕಾರ್ಯಕ್ರಮದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಹಾವು-ನಾವು ಉಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಹಾವುಗಳು ನಾಶ ಆಗುತ್ತಿರುವುದಕ್ಕೆ ಮನುಷ್ಯನೇ ಕಾರಣ. ಕಾಡು ಪೊದೆಗಳ ನಾಶ, ಹೊಲ ಗದ್ದೆಗಳಲ್ಲಿ ರಾಸಾಯನಿಕ ಸಿಂಪಡಣೆ ಯಿಂದ ಹಾವುಗಳು ಪ್ರಾಣ ಕಳೆದು ಕೊಳ್ಳುತ್ತಿವೆ. ನಿರುಪದ್ರವಿಗಳಾದ ಉರಗ ಗಳು ಮನುಷ್ಯನ ತಂಟೆಗೆ ತಾವಾಗಿ ಎಂದಿಗೂ ಹೋದದ್ದಿಲ್ಲ. ಜೀವ ಜಗತ್ತಿನ ಆಹಾರ ಸರಪಣಿ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ಹಾವುಗಳನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮದಾಗಬೇಕು ಎಂದರು. ಪ್ರಾಂಶುಪಾಲ ಜೀವನ್‌ದಾಸ್‌ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಜೀವಂತ ಹಾವುಗಳ ಪ್ರಾತ್ಯಕ್ಷಿಕೆ
ಹಾವಿನ ಹಲವು ಪ್ರಬೇಧಗಳು, ಅಂಗಾಂಗಗಳು, ಅವುಗಳ ಆಹಾರ ಕ್ರಮ, ಬದುಕಿನ ರೀತಿ-ನೀತಿಗಳು ಮತ್ತು ಹಾವು ಕಚ್ಚಿದರೆ ನಾವು ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಕುರಿತು ಡಾ| ರವೀಂದ್ರನಾಥ ಐತಾಳ್‌ ವಿವರಿಸಿದರು. ಕಟ್ಟಿನ ಹಾವು, ಹೆಬ್ಟಾವು, ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು, ಕನ್ನಡಿ ಹಾವು, ಮಂಡಲ ಹಾವು, ಸಮುದ್ರ ಹಾವು ಇತ್ಯಾದಿ ಉರಗಗಳ ಕುರಿತು ಅವರು ಮಾಹಿತಿ ನೀಡಿದರು. ಜೀವಂತ ಹಾವುಗಳನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next