Advertisement
32.23 ಚದರ ಕಿ.ಮೀ. ವಿಸ್ತೀರ್ಣ ದಲ್ಲಿ ಹರಡಿಕೊಂಡಿರುವ ಪುತ್ತೂರು ನಗರಸಭೆ 2015 ಜನವರಿ 22ರಂದು ಮೇಲ್ದರ್ಜೆಗೇರಿತು. ಪಟ್ಟಣ ಪಂಚಾಯತ್ ಆಗಿದ್ದ ಪುತ್ತೂರು 1973ರಲ್ಲಿ ಪುರಸಭೆಯಾಗಿತ್ತು. ಅದುವರೆಗೆ 11 ಚದಕ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ನಗರದ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಹತ್ತಿರದ ಗ್ರಾಮಗಳ ಕೆಲ ಭಾಗಗಳನ್ನು ತೆಗೆದುಕೊಂಡು, 32.23 ಚ.ಕಿ.ಮೀ.ಗೆ ವಿಸ್ತರಿಸಿಕೊಂಡಿತು.
ಪುತ್ತೂರು, ಉಳ್ಳಾಲ ನಗರಸಭೆ ಹಾಗೂ ಬಂಟ್ವಾಳ ಪುರಸಭೆ ಚುನಾವಣೆಗೆ ಜೂನ್ ಅಂತ್ಯದ ವೇಳೆಗೆ ನೋಟಿಫಿಕೇಷನ್ ಆಗುವ ಸಾಧ್ಯತೆ ಇದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಚುನಾವಣೆ ನಡೆಯಬಹುದು. ಇದಕ್ಕೆ ಮೊದಲು ಮತದಾರರ ಪಟ್ಟಿ, ಕರಡು ಪ್ರಕಟ, ಆಕ್ಷೇಪ ಸಲ್ಲಿಕೆ ಆಗಬೇಕು. ಬಳಿಕವಷ್ಟೇ ವಾರ್ಡ್‌ಗೆ ತಕ್ಕಂತೆ ಮತದಾರರ ಪಟ್ಟಿಯ ಅಂತಿಮ ರೂಪು ಕೈಗೆ ಸಿಗಲಿದೆ. ಇದಕ್ಕೆ ಮೇ 31ರ ಗಡುವನ್ನು ಜಿಲ್ಲಾಧಿಕಾರಿ ನಗರಸಭೆ ಹಾಗೂ ಚುನಾವಣೆಯ ಹೊಣೆ ಹೊತ್ತಿರುವ ತಾಲೂಕು ಕಚೇರಿಗೆ ನೀಡಿದ್ದಾರೆ.
Related Articles
ಪುತ್ತೂರು ನಗರಸಭೆಯ ಮೊದಲ ಐದು ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ನಾಲ್ಕು ವಾರ್ಡ್‌ಗಳನ್ನು
ಸೇರಿಸುವ ಸಂದರ್ಭ, ಉಳಿದ ವಾರ್ಡ್ಗಳ ಸಂಖ್ಯೆಯೂ ಬದಲಾಗಿದೆ. ಅದು ಈ ಕೆಳಗಿನಂತಿದೆ- 6ನೇ ವಾರ್ಡ್ ಬನ್ನೂರು 3, ವಾರ್ಡ್ 7- ಚಿಕ್ಕಮುಟ್ನೂರು 1, ವಾರ್ಡ್ 8- ಚಿಕ್ಕಮುಟ್ನೂರು 2, ವಾರ್ಡ್9 – ಚಿಕ್ಕ ಮುಟ್ನೂರು 3, ವಾರ್ಡ್ 10- ಕಸ್ಬಾ 1, ವಾರ್ಡ್ 11- ಕಸ್ಬಾ 2, ವಾರ್ಡ್ 12 – ಕಸ್ಬಾ 3, ವಾರ್ಡ್ 13 – ಕಸ್ಬಾ 4, ವಾರ್ಡ್ 14 – ಕಸ್ಬಾ 5, ವಾರ್ಡ್ 15 – ಕಸ್ಬಾ 6, ವಾರ್ಡ್ 16 – ಕಸ್ಬಾ 7, ವಾರ್ಡ್ 17 – ಕಸ್ಬಾ 8, ವಾರ್ಡ್ 18 – ಕಸ್ಬಾ 9, ವಾರ್ಡ್ 19 – ಕಸ್ಬಾ 10, ವಾರ್ಡ್ 20 – ಕಸ್ಬಾ 11, ವಾರ್ಡ್ 21 – ಕಸ್ಬಾ 12, ವಾರ್ಡ್ 22 – ಕಸ್ಬಾ 13, ವಾರ್ಡ್ 23- ಕಸ್ಬಾ 14, ವಾರ್ಡ್ 24- ಕೆಮ್ಮಿಂಜೆ 1, ವಾರ್ಡ್ 25- ಕೆಮ್ಮಿಂಜೆ 2, ವಾರ್ಡ್ 26- ಕೆಮ್ಮಿಂಜೆ 3, ವಾರ್ಡ್ 27- ಕೆಮ್ಮಿಂಜೆ 4, ವಾರ್ಡ್ 28- ಕೆಮ್ಮಿಂಜೆ 5, ವಾರ್ಡ್ 29- ಆರ್ಯಾಪು 1, ವಾರ್ಡ್ 30- ಆರ್ಯಾಪು 2, ವಾರ್ಡ್ 31- ಬಲ್ನಾಡು.
Advertisement
ಏನೆಲ್ಲ ಬದಲಾವಣೆ?ನಾಲ್ಕು ವಾರ್ಡ್‌ಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಆದರೆ ಗ್ರಾಮಗಳಿಂದ ಹೊಸ ಪ್ರದೇಶವನ್ನು ತೆಗೆದುಕೊಂಡಿಲ್ಲ. ಒಂದಷ್ಟು ಗಡಿ ಗೊಂದಲವನ್ನಷ್ಟೇ ವಿಎಗಳ ಜತೆ ಮಾತುಕತೆ ನಡೆಸಿ ಪರಿಹರಿಸಿ ಕೊಳ್ಳಲಾಗಿದೆ. ಬನ್ನೂರು- 3, ಚಿಕ್ಕಮುಟ್ನೂರು-3, ಕೆಮ್ಮಿಂಜೆ- 4, ಕೆಮ್ಮಿಂಜೆ- 5, ಆರ್ಯಾಪು- 2 ಹೊಸ ವಾರ್ಡ್ ಗಳ ಹೆಸರು. ಇದುವರೆಗೆ ಪುತ್ತೂರು ಕಸ್ಬಾ 15 ಇತ್ತು. ಇದರ ಸಂಖ್ಯೆ 14ಕ್ಕೆ ಇಳಿಕೆಯಾಗಿದೆ. ಮುಂದಿನ ಚುನಾವಣೆಯಿಂದಲೇ ಜಾರಿ
ಪುತ್ತೂರು ನಗರಸಭೆಯ 27 ವಾರ್ಡ್ ಗಳನ್ನು 31ಕ್ಕೆ ಏರಿಸಲಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ 2017ರಲ್ಲೇ ಗೆಜೆಟ್ ನೋಟಿಫಿಕೇಷನ್ ಮಾಡಿದೆ. ಮುಂದಿನ ನಗರಸಭೆ ಚುನಾವಣೆಯಿಂದಲೇ ಇದು ಜಾರಿಗೆ ಬರಲಿದೆ.
- ಎಚ್.ಕೆ. ಕೃಷ್ಣಮೂರ್ತಿ,
ಸಹಾಯಕ ಆಯುಕ್ತ ಗಣೇಶ್ ಎನ್. ಕಲ್ಲರ್ಪೆ