Advertisement
ದರ್ಬೆ ಅಶ್ವಿನಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ 2018 -19ನೇ ಸಾಲಿನ ಮಹಾಸಭೆ, ದಿನಚರಿ ಬಿಡುಗಡೆ ಮತ್ತು ನಿವೃತ್ತರಿಗೆ ಸಮ್ಮಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಅರಣ್ಯ ಸಂಪತ್ತಿನ ರಕ್ಷಣೆ ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಅರಣ್ಯ ಇಲಾಖೆ ಸಿಬಂದಿ ಶಿಸ್ತುಬದ್ಧ ಹಾಗೂ ಪ್ರಾಮಾಣಿಕ ಕರ್ತವ್ಯಕ್ಕೆ ಹೆಸರಾಗಿದ್ದಾರೆ. ಇಲಾಖೆಯಲ್ಲಿ ಸಾಕಷ್ಟು ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಶಿಸ್ತಿನ ಇಲಾಖೆಗೆ ಸಚಿವನಾಗಿದ್ದ ಹೆಮ್ಮೆ ನನಗಿದೆ. ಎಲ್ಲ ಖಾಕಿ ಇಲಾಖೆಗಳಿಗೆ ಸಚಿವನಾಗಿದ್ದ ಅನುಭವ ಖುಷಿ ನೀಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಸಂಜೀವ ಕೆ. ಮಾತನಾಡಿ, ಅರಣ್ಯ ಅಧಿಕಾರಿಗಳು ಜನರೊಂದಿಗೆ ಸಂಘರ್ಷ ಮಾಡಲು ಇರುವವರಲ್ಲ. ಅಭಿವೃದ್ಧಿಗೆ ಅಡ್ಡಿಪಡಿಸುವ ಇಚ್ಛೆಯೂ ನಮಗಿಲ್ಲ. ಅರಣ್ಯ ರಕ್ಷಣೆಯ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು. ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ 182 ಉಪವಲಯ ಅರಣ್ಯಾಧಿಕಾರಿ ಹುದ್ದೆಗಳಿವೆ. ಇದರಲ್ಲಿ 90 ಹುದ್ದೆಗಳು ಖಾಲಿ ಇದ್ದರೂ ಜೇಷ್ಠತೆಯ ಆಧಾರದಲ್ಲಿ ಭಡ್ತಿ ನೀಡಿ ನೇಮಕ ಮಾಡಿಕೊಳ್ಳದಿರುವುದು ವಿಷಾದನೀಯ ಎಂದರು.
Related Articles
Advertisement
ಸಮ್ಮಾನಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕೆ. ನಾರಾಯಣ ಹಾಗೂ ಮಾಧವ ನಾಯ್ಕ ಅವರನ್ನು ಸಮ್ಮಾನಿಸಲಾಯಿತು. ಇಲಾಖೆಯ ಸಹಕಾರದೊಂದಿಗೆ 4000ಕ್ಕೂ ಅಧಿಕ ಹಾವುಗಳನ್ನು ಹಿಡಿದ ಉರಗ ಸ್ನೇಹಿ ತೇಜಸ್ ಅವರನ್ನು ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಕ್ತದಾನದಲ್ಲಿ ಪಾಲೊಅ್ಗಂಡ ಸಂಘದ ಸದಸ್ಯರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್ ವಿ. , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಬಿ.ಟಿ. ಸ್ವಾಗತಿಸಿ, ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ವಂದಿಸಿದರು. ಉಪವಲಯ ಅರಣ್ಯಾಧಿಕಾರಿ ಮಹಾಬಲ ಬಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಶ್ರೀ ಧರ್ಮಸ್ಥಳ ಮೇಳದ ಕಲಾವಿದರಿಂದ ಯಕ್ಷ ನೃತ್ಯ ವೈಭವ ನಡೆಯಿತು. ಅರಣ್ಯ ಸಂಸ್ಕೃತಿ ಉಳಿಯಬೇಕು
ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಅರಣ್ಯ ಸಂಸ್ಕೃತಿ, ಕೃಷಿ ಸಂಸ್ಕೃತಿ ಹೋಗಿ ಈಗ ಕೈಗಾರಿಕಾ ಸಂಸ್ಕೃತಿ ಬಂದಿದೆ. ಪರಿವರ್ತನೆ ಜಗದ ನಿಯಮನವಾದರೂ ಪ್ರಾಣವಾಯು, ಜೀವಜಲ, ಆಹಾರದಲ್ಲಿ ಬದಲಾವಣೆ ಪ್ರಾಣಿಸಂಕುಲಗಳಿಗೆ ಕಂಟಕವಾಗಲಿದೆ. ಆರೋಗ್ಯವಂತ ಸಮಾಜಕ್ಕಾಗಿ ಆರೋಗ್ಯವಂತ ಪರಿಸರವೂ ಬೇಕಾಗಿರುವುದರಿಂದ ಅರಣ್ಯ ಇಲಾಖೆಗೆ ಸಾಕಷ್ಟು ಜವಾಬ್ದಾರಿ ಇದೆ ಎಂದು ಹೇಳಿದರು.