ಬೆಟ್ಟಂಪಾಡಿ : ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಗ್ರಾ.ಪಂ. ಗ್ರಾಮಸಭೆ ನಿರ್ಣಯವನ್ನು ಅಂಗಿಕರಿಸಿದೆ.
ತಾಲೂಕನ್ನು ಬಿಟ್ಟು ಉಳಿದೆಲ್ಲ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು ನಮ್ಮ ತಾಲೂಕಿಗೆ ಅನ್ಯಾಯ ಮಾಡಲಾಗಿದೆ. ತತ್‌ಕ್ಷಣ ನಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರಕಾರವನ್ನು ಆಗ್ರಹಿಸಿ ನಿರ್ಣಯವನ್ನು ಅಂಗಿಕರಿಸಿತು. ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲು ಆಗ್ರಹಿಸಿ ನಿರ್ಣಯಿಸಲಾಯಿತು.
ಅನುಮತಿ ಕಡ್ಡಾಯ
ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಯಿಲ್ಲದೆ ಬೇಕಾಬಿಟ್ಟಿಯಾಗಿ ಬ್ಯಾನರ್, ಬಂಟಿಂಗ್ಸ್ ಹಾಕುತ್ತಿರುವುದು ಗ್ರಾ.ಪಂ. ಗಮನಕ್ಕೆ ಬಂದಿದೆ. ಇದು ಕಾನೂನು ಬಾಹಿರ. ಅನುಮತಿ ಪಡೆಯದೆ ಹಾಕಿದರೆ ಅವರ ವಿರುದ್ದ ಕ್ರಮ ಜರಗಿಸಬೇಕು. ಅಲ್ಲದೆ ಕಾರ್ಯಕ್ರಮ ಮುಗಿದ ತತ್‌ಕ್ಷಣ ತೆರವು ಗೊಳಿಸಬೇಕು ಎಂದು ನಿರ್ಣಯಿಸಲಾಯಿತು.
ಕಾರ್ಯದರ್ಶಿ ಬಾಬು ನಾಯ್ಕ ಅನುಪಾಲನ ವರದಿ ಮಂಡಿಸಿದ ಮೇಲೆ ಚರ್ಚೆಗೆ ನಿಯಂತ್ರಣಾ ಧಿಕಾರಿ ಅವಕಾಶ ನೀಡಿದಾಗ ಮಾತನಾಡಿದ ಗ್ರಾಮಸ್ಥ ಚಂದ್ರಶೇಖರ ರೈ, ಕಳೆದ ಸಭೆಯಲ್ಲಿ ನಿರ್ಣಯಿಸಿದ ನಿರ್ಣಯ ಕಾರ್ಯರೂಪಕ್ಕೆ ಬಂದಿದೆಯೆ ಸಭೆಗೆ ಸ್ಪಷ್ಟನೆ ನೀಡಿ ಎಂದಾಗ ಉತ್ತರಿಸಿದ, ಕಾರ್ಯ ದರ್ಶಿಯವರು ನಿರ್ಣಯವನ್ನು ಅಯಾಯ ಇಲಾಖೆಗೆ ಕಳುಹಿಸಲಾಗಿದೆ ಎಂದರು.
ಗ್ರಾಮಸಭೆ ನೋಟಿಸ್ ಸಿಕ್ಕಿಲ್ಲದಿದ್ದರೂ ಸಭೆಗೆ ಬಂದಿದ್ದೇನೆ‰ ಎಂದು ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲು ಬಂದ ಸಿಆರ್‌ಪಿ ಜನಾರ್ದನ ನನಗೆ ಸಭೆಯ ನೋಟಿಸ್ ಸಿಕ್ಕಿಲ್ಲ. ಇತ್ತೀಚೆಗೆ ಪಿಡಿಒ ಹೇಳಿದ್ದ ಕಾರಣ ಬಂದಿದ್ದೇನೆ ಎಂದು ಹೇಳಿದಾಗ ಉತ್ತರಿಸಿದ ಪಿಡಿಒ ಹಾಗೂ ಸದಸ್ಯ ರಮೇಶ್ ಶೆಟ್ಟಿ, ಶಿಕ್ಷಣಾಧಿಕಾರಿ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದರು. ಪ್ರೌಢಶಾಲೆ ಮತ್ತು ಬೆಟ್ಟಂಪಾಡಿ ಗ್ರಾಮದ ಗಡಿಯಲ್ಲಿರುವ ಬಗ್ಗೆ ಇದ್ದ ಗೊಂದಲದ ಕುರಿತು ಚರ್ಚೆ ನಡೆಯಿತು. ಸಂಬಂಧ ಪಟ್ಟ ಇಲಾಖೆ ಗಮನ ಹರಿಸುವಂತೆ ತಿಳಿಸಲಾಯಿತು.
ಆರೋಗ್ಯ ಇಲಾಖೆಯಿಂದ ಪದ್ಮಾವತಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ನಾಗರತ್ನಾ, ಪಶು ಸಂಗೋಪನ ಇಲಾಖೆಯ ಪಾಣಾಜೆ ಆಸ್ಪತ್ರೆಯ ಡಾಣ ಪುಷ್ಪರಾಜ್ ಶೆಟ್ಟಿ, ಮಾಹಿತಿ ನೀಡಿದರು. ಬೆಟ್ಟಂಪಾಡಿ ಮೆಸ್ಕಾಂ ಸಿಬಂದಿ ಸ್ವರ್ಣಲತಾ ಉಪಸ್ಥಿತರಿದ್ದರು. ಸಭೆಯ ಮಾರ್ಗದರ್ಶಿ ಅಧಿಕಾರಿಯೂ ತೋಟಗಾರಿಕೆ ಇಲಾಖೆಯ ಅಧಿಕಾರಿಯೂ ಆದ ರೇಖಾ ಮಾಹಿತಿ ನೀಡಿದರು. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಜಗನ್ನಾಥ ರೈ ಕೊಮ್ಮಂಡ, ವಿನೋದ್ ಕುಮಾರ್ ರೈ ಗುತ್ತು, ರಮೇಶ್ ಶೆಟ್ಟಿ ಕೊಮ್ಮಂಡ, ರಕ್ಷಣ್ ರೈ, ಮೊದು ಕುಂಞೆ ಕೊನಡ್ಕ, ಐತ್ತಪ್ಪ. ಜಿ., ಪಾರ್ವತಿ ಲಿಂಗಪ್ಪ ಗೌಡ, ದಿವ್ಯಾ ಪಾರ, ಪದ್ಮಾವತಿ ಡಿ., ಪುಷ್ಪಲತಾ, ಪ್ರೇಮಲತಾ, ಭವಾನಿ ಪಿ., ಬೇಬಿ ಜಯರಾಮ ಪೂಜಾರಿ, ಪ್ರಕಾಶ್ ರೈ ಬೈಲಾಡಿ, ಶಾಲಿನಿ ಘಾಟೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ ವಾಚಿಸಿದರು. ರಾಮಣ್ಣ, ಸಂದೀಪ್, ಚಂದ್ರಾವತಿ, ಕವಿತಾ, ಸವಿತಾ ಸಹಕರಿಸಿದರು.
ನೀರಿನ ಸಮಸ್ಯೆ ಬಗೆಹರಿಸಲು ಕ್ರಮ
ಗುಳ್ಳಮೂಲೆ ಮತ್ತು ಕೆಲ್ಲಾಡಿ ಕುಡಿಯುವ ನೀರಿನ ಯೋಜನೆ ಬಗ್ಗೆ ನಾಗರಾಜ್ ಘಾಟೆ ಪ್ರಸ್ತಾವಿಸಿದಾಗ ಪಿಡಿಒ ಶಾಂತಾ
ರಾಮ, ಗುಳ್ಳಮೂಲೆ ನೀರಿನ ಸಂಪರ್ಕ ವನ್ನು ಗ್ರಾ.ಪಂ.ಗೆ ಇತ್ತೀಚೆಗೆ ಹಸ್ತಾಂತರಿಸಲಾಗಿದೆ. ಇದನ್ನು ಸರಿಪಡಿಸಲು ಇನ್ನು ಕ್ರಮ ತೆಗೆದುಕೊಳ್ಳ ಲಾಗುವುದು. ಕೆಲ್ಲಾಡಿ ನೀರಿನ ಯೋಜನೆ ಇನ್ನೂ ಹಸ್ತಾಂತರ ಆಗಿಲ್ಲ. ಅದಕ್ಕೆ ಇಟ್ಟ ಹಣ ಮುಗಿದಿದ್ದು ಇನ್ನು ಅನುದಾನ ಬಂದ ಕೂಡಲೇ ಕೆಲಸ ಆರಂಭಿಸಿ ಪೂರ್ತಿಗೊಳಿಸಲಾಗುವುದು ಎಂದರು. ಪದವಿ ಕಾಲೇಜಿಗೆ ನೀರು ಸರಿಯಾಗಿ ಸಿಗುತ್ತಿಲ್ಲ ಎಂದು ಕೆ.ಪಿ.ಭಟ್ ಹೇಳಿ
ದಾಗ ಉತ್ತರಿಸಿದ ಪಿಡಿಒ, ಕಾಲೇಜಿನ ಮೂಲ ಸೌಕರ್ಯಗಳಿಗೆ ಅವರು ಉನ್ನತ ಶಿಕ್ಷಣ ಇಲಾಖೆಗೆ ಬರೆದು ಆಡಳಿತ ಮಂಡಳಿ ಮುಖಾಂತರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.