Advertisement
ಪುತ್ತೂರು ನಗರ ಪೊಲೀಸ್ ಠಾಣೆಯ 30 ವರ್ಷ ಪ್ರಾಯದ ಕಾನ್‌ಸ್ಟೇಬಲ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಒಬ್ಬರ 40 ವರ್ಷ ಪ್ರಾಯದ ತಾಯಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾನ್‌ಸ್ಟೇಬಲ್ ಅವರ ಸಂಪ್ಯ ವಸತಿ ಗೃಹದ ಕೊಠಡಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಮಹಿಳಾ ಕಾನ್‌ಸ್ಟೇಬಲ್ ಅವರ ತಾಯಿ ಇರುವ ಪುತ್ತೂರು ವಸತಿ ಗೃಹದ ಕೊಠಡಿಯನ್ನೂ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಬನ್ನೂರು ನೀರ್ಪಾಜೆ ನಿವಾಸಿ ಸುಮಾರು 42ವರ್ಷ ವ್ಯಕ್ತಿ, ತಿಂಗಳಾಡಿ ಸಮೀಪದ ನಿಡ್ಯಾಣ ನಿವಾಸಿ 56 ವರ್ಷ ಪ್ರಾಯದ ವ್ಯಕ್ತಿ, ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ 22 ವರ್ಷದ ಬಾಣಂತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ