Advertisement

ಬಂದ್‌ಗೆ ಪುತ್ತೂರು ಜನತೆಯ ಸಂಪೂರ್ಣ ಸಾಥ್‌

09:51 PM Mar 29, 2020 | Sriram |

ಪುತ್ತೂರು: ಸಂಪೂರ್ಣ ಬಂದ್‌ ಆಚರಣೆಯ ಎರಡನೇ ದಿನವಾದ ರವಿವಾರ ಜಿಲ್ಲಾಡಳಿತದ ಉದ್ದೇಶ ಮತ್ತು ಪೊಲೀಸರ ಸಕಾಲಿಕ ಕ್ರಮಗಳಿಗೆ ಪುತ್ತೂರಿನ ಜನತೆ ಸಾಥ್‌ ನೀಡಿ ಕೋವಿಡ್-19 ಹೆಮ್ಮಾರಿ ತಡೆಗೆ ಕೈಜೋಡಿಸಿದ್ದಾರೆ.

Advertisement

ಲಾಕ್‌ಡೌನ್‌ ಘೋಷಣೆಯಾದ ಆರಂಭಿಕ ದಿನಗಳಲ್ಲಿ ಬೆಳಗ್ಗೆ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಈ ಹಂತದಲ್ಲಿ “ಅಗತ್ಯ-ಅನಗತ್ಯ’ ಕಾರಣಗಳಿಂದ ಜನತೆಯ ಓಡಾಟ ಇತ್ತು. ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಈಗ ಪುತ್ತೂರು ತಾಲೂಕಿನಾದ್ಯಂತ ಬಂದ್‌ ಯಶಸ್ವಿಯಾಗಿ ಜಾರಿಗೊಂಡಿದೆ. ಜನತೆ ಮನೆಯಿಂದ ಹೊರಬಾರದೆ ಬಂದ್‌ ಆಶಯಕ್ಕೆ ಪೂರ್ಣ ಬೆಂಬಲ ನೀಡಿದರು.

ಪುತ್ತೂರು ನಗರದಲ್ಲಿ ಬೆರಳೆಣಿಕೆಯ ಮೆಡಿಕಲ್‌ಗ‌ಳನ್ನು ಹೊರತುಪಡಿಸಿ ಎಲ್ಲ ತರಹದ ಅಂಗಡಿಗಳೂ ಬಾಗಿಲು ತೆರೆಯಲಿಲ್ಲ. ಉಪ್ಪಿನಂಗಡಿ ಪೇಟೆಯಲ್ಲಿ ಜನತೆಗೆ ಬೆಳಗಿನ 8 ಗಂಟೆಯ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಜನತೆಯ ಅನಗತ್ಯ ಓಡಾಟ ಯಾವುದೇ ಭಾಗದಲ್ಲೂ ಕಂಡುಬರಲಿಲ್ಲ.

ಪೆಟ್ರೋಲ್‌ ಪಂಪುಗಳೂ ಬಂದ್‌
ಜನತೆಯ ಓಡಾಟಕ್ಕೆ ಅತೀ ಅಗತ್ಯವಾಗಿರುವ ಪೆಟ್ರೋಲ್‌ ಪಂಪ್‌ಗ್ಳು ರವಿವಾರ ಸಂಪೂರ್ಣ ಬಂದ್‌ ಆಚರಣೆ ಮಾಡಿದವು.

Advertisement

ಸ್ವಲ್ಪ ಮಟ್ಟಿಗೆ ಸಮಸ್ಯೆ
ಇದರಿಂದ ವೈದ್ಯಕೀಯ ಆವಶ್ಯಕತೆ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿ ವರ್ಗಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಯಿತು.

ಉಚಿತ ಹಾಲು ಪೂರೈಕೆ
ರವಿವಾರ ಮತ್ತು ಸೋಮವಾರ ಹಾಲಿನ ಸೊಸೈಟಿಗಳಲ್ಲಿ ಹಾಲು ಸಂಗ್ರಹಿಸುವುದನ್ನು ಸ್ಥಗಿತ ಗೊಳಿಸಿದ ಕಾರಣ ರವಿವಾರ ತಾಲೂಕಿನಾದ್ಯಂತ ಲಕ್ಷಗಟ್ಟಲೆ ಲೀ. ಹಾಲು ವ್ಯರ್ಥವಾಯಿತು. ಹೈನು ಉದ್ಯಮ ನಡೆಸುತ್ತಿರುವ ಕೃಷಿಕರು ಅಕ್ಕಪಕ್ಕದ ಮನೆಗಳಿಗೆ ಉಚಿತವಾಗಿ ಹಾಲು ನೀಡಿದರು. ರೈತರ ಮನೆಯಲ್ಲಿ ತಲಾ 25ರಿಂದ 50 ಲೀ. ಹಾಲು ದೊರೆ ಯುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿಗುವ ಹಾಲನ್ನು ಸೊಸೈಟಿಗೂ ನೀಡಲಾಗದೆ, ಜನತೆಗೂ ಹಂಚಲಾಗದೆ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು. ಪುತ್ತೂರು ತಾಲೂಕಿನ ಇರ್ದೆ ನಿವಾಸಿ ರಾಮಣ್ಣ ಪೂಜಾರಿ ತಮ್ಮಲ್ಲಿ ಕರೆದ 30 ಲೀ.ಹಾಲನ್ನು ಶಾಸಕರ “ವಾರ್‌ರೂಮ್‌’ಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next