ತುರ್ತು ಅಗ್ನಿಶಮನದ ಸಂದರ್ಭ, ಇಕ್ಕಟ್ಟಾದ ಸ್ಥಳದಲ್ಲಿ ಸಂಚಾರಕ್ಕೆ ಈ ಬುಲೆಟ್ ಬೈಕ್ ಬಳಕೆಯಾಗಲಿದೆ. ಈಗಾಗಲೇ ಮಂಗ ಳೂರು ಸೇರಿದಂತೆ ನಗರ ಕೇಂದ್ರಗಳಲ್ಲಿ ಇದು ಬಳಕೆಯಲ್ಲಿದೆ. ಪುತ್ತೂರಿಗೆ ಕೆಲ ದಿನಗಳ ಹಿಂದಷ್ಟೇ ತರಲಾಗಿದ್ದು, ಸೇವೆಗೆ ಸಿದ್ಧವಾಗಿದೆ.
Advertisement
ಹೇಗಿದೆ ಬುಲೆಟ್ರಾಯಲ್ ಎನ್‌ಫೀಲ್ಡ್‌ನ 350 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಬೆಂಕಿ ನಂದಕ ಬುಲೆಟ್ ಆಗಿ ಪರಿವರ್ತಿಸಲಾಗಿದೆ. ಬೈಕ್‌ನ ಹಿಂಭಾಗದಲ್ಲಿ ಹತ್ತು ಲೀಟರ್ ಸಾಮರ್ಥ್ಯದ ಫೋಮ್(ದ್ರಾವಣ) ತುಂಬಿರುವ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸುತ್ತ ಸಣ್ಣ ಗಾತ್ರದ 2.ಕೆ.ಜಿ ಸಾಮರ್ಥ್ಯದ ಏರ್ ಸಿಲಿಂಡರ್ ಇದೆ. ಪಕ್ಕದಲ್ಲಿರುವ ಹೈಡ್ರಾಲಿಕ್ ಉಪಕರಣ ಸಿಲಿಂಡರ್ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಜತೆಗೆ ಬೈಕ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಧ್ವನಿವರ್ಧಕ, ಕೆಂಪು ದೀಪಗಳಿವೆ.
ಈ ಬೈಕ್‌ನಲ್ಲಿ ಚಾಲಕ, ಹಿಂಬದ ಸವಾರ ಕುಳಿತುಕೊಳ್ಳಬಹುದು. ಕಾರ್ಯಾಚರಣೆ ಸಂದರ್ಭ ಬೈಕ್‌ನ ಹಿಂಭಾಗದಲ್ಲಿರುವ ಎರಡು ಸಿಲಿಂಡರ್ ತೆಗೆದು ಬೆನ್ನಿಗೆ ನೇತು ಹಾಕಲು ಸಾಧ್ಯವಿದೆ. ಸಿಲಿಂಡರ್ ಜತೆಗಿನ ಗನ್ ಟ್ರಗರ್ ಅದುಮಿದರೆ, 25 ರಿಂದ 35 ಅಡಿಯಷ್ಟು ದೂರ ಅಗ್ನಿ ನಿಯಂತ್ರಣ ದ್ರಾವಣ ಹೊರಕ್ಕೆ ಚಿಮ್ಮಿ, ಬೆಂಕಿ ನಂದಿಸಲು ಸಾಧ್ಯವಾಗುತ್ತದೆ. ಬಳಕೆ ಎಲ್ಲೆಲ್ಲಿ
ಸಣ್ಣ ಪ್ರಮಾಣದ ಗ್ಯಾಸ್ ಸೋರಿಕೆ, ವಿದ್ಯುತ್ ಶಾರ್ಟ್ ಸರ್ಕ್ನೂಟ್, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹಾಗೂ ಇತರೆ ಬೆಂಕಿ ಅವಘಡ ಸಂಭವಿಸಿದಾಗ ಇದನ್ನು ಬಳಸಲಾಗುತ್ತದೆ. ಅಗ್ನಿಶಾಮಕ ದಳದ ದೊಡ್ಡ ಗಾತ್ರದ ವಾಹನಗಳು ಇಕ್ಕಟ್ಟಾದ ಸ್ಥಳದಲ್ಲಿ ಸಂಚರಿಸುವುದು ತ್ರಾಸದಾಯಕವಾಗಿರುವ ಕಾರಣ, ಈ ಬುಲೆಟ್ ವಾಹನ ಶೀಘ್ರ ಸ್ಪಂದನೆಗೆ ಅನುಕೂಲ ಎಂಬ ಕಾರಣ ಹೊಂದಲಾಗಿದೆ.
Related Articles
ಬುಲೆಟ್ ಪ್ರಯೋಜನ ಅಂದರೂ, ಅದರ ಬಳಕೆ ಸುಲಭ ಅಲ್ಲ. 350 ಸಿಸಿ ಬೈಕ್‌ನಲ್ಲಿ ಸವಾರ ಸೇರಿ ಇಬ್ಬರು ಕುಳಿತುಕೊಳ್ಳಲು ಸ್ಥಳ ಇದ್ದರೂ, ಅಗ್ನಿ ನಿಯಂತ್ರಣ ಸಾಧನ ಸೇರಿದರೆ ಒಟ್ಟು ತೂಕ 500 ಕೆ.ಜಿ ದಾಟುತ್ತದೆ. ಹಾಗಾಗಿ ಎಕ್ಸ್ ಪರ್ಟ್‌ಗಳೇ ಬೈಕ್ ಚಲಾಯಿಸಬೇಕಷ್ಟೆ. ಏರು ಮಾರ್ಗದಲ್ಲಿ ಬೈಕ್ ನಿಲ್ಲಿಸಿದರೆ, ಸವಾರನಿಗೆ ಭಾರ ತಡೆದುಕೊಳ್ಳುವ ಶಕ್ತಿ ಬೇಕು. ಇಲ್ಲದಿದ್ದರೆ ಪಲ್ಟಿ. ಆಕಸ್ಮಿಕವಾಗಿ ಬಿದ್ದರೆ, ಹಿಂಬದಿ ಸವಾರನಿಗೆ ಗಾಯ ಉಂಟಾಗುವುದು ಖಂಡಿತ. ಅಪಾಯದ ಸಂದರ್ಭ ಹಿಂಬದಿ ಸವಾರ ಪಾರಾಗಲು ಬೇಕಾದ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಮುಖ್ಯ ಕಾರಣ.!
Advertisement