Advertisement

Puttur; ನಕಲಿ ದಾಖಲೆ ತಯಾರಿಸುತ್ತಿದ್ದ ಆರೋಪಿಗೆ ಜಾಮೀನು ಮಂಜೂರು

09:57 PM Aug 22, 2023 | Team Udayavani |

ಪುತ್ತೂರು: ಗ್ರಾ. ಪಂ.ಗಳು ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್‌ ಸ್ಟಾಂಪ್‌, ದಾಖಲೆ ಪತ್ರಗಳನ್ನು ತಯಾರಿಸಿದ್ದ ಪ್ರಕರಣದ ಆರೋಪಿ ವಿಶ್ವನಾಥ್‌ ಬಿ.ವಿ.ಗೆ ಜಿಲ್ಲಾ ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ನೀಡಿದೆ.

Advertisement

ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ ಎಚ್‌. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಜು. 11ರಂದು ಪುತ್ತೂರು ನಗರ ಠಾಣಾ ಪೊಲೀಸರು ಪಡೀಲ್‌ನ ಬಿ.ಬಿ.ಎಲೆಕ್ಟ್ರಿಕಲ್ಸ್‌ ಆ್ಯಂಡ್‌ ಪ್ಲಂಬ್ಲಿìಸ್‌ ಕಚೇರಿಗೆ ದಾಳಿ ನಡೆಸಿದ್ದರು. ಆ ವೇಳೆ ಅಲ್ಲಿ, ವಿವಿಧ ಗ್ರಾ. ಪಂ.ಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್‌ ಸ್ಟಾಂಪ್‌ ಹಾಗೂ ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು. ವಿಶ್ವನಾಥ ಅವರು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next