ಪುತ್ತೂರು : ತಾಲೂಕಿನಲ್ಲಿ 2016-17ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿತು. ಪರೀಕ್ಷೆಗೆ ಒಟ್ಟು ನೋಂದಣಿಗೊಂಡ 5,199 ವಿದ್ಯಾ ರ್ಥಿಗಳ ಪೈಕಿ 5,136 ಮಂದಿ ಪರೀಕ್ಷೆ ಬರೆದಿದ್ದು, 63 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
Advertisement
12 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ ವಿಷಯವನ್ನು ಪ್ರಥಮ ಭಾಷೆಯನ್ನಾಗಿ ಆಯ್ದುಕೊಂಡ ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ನಗರದ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ, ದರ್ಬೆ ಫಿಲೋಮಿನಾ ಪ್ರೌಢಶಾಲೆ, ಸೈಂಟ್ ವಿಕ್ಟರ್ ಪ್ರೌಢಶಾಲೆ, ತೆಂಕಿಲ ವಿವೇಕಾನಂದ ಪ್ರೌಢಶಾಲೆ, ಉಪ್ಪಿ ನಂಗಡಿ ಸರಕಾರಿ ಪ್ರೌಢಶಾಲೆ, ಸೈಂಟ್ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ, ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಸರಕಾರಿ ಪ್ರೌಢಶಾಲೆ ಕುಂಬ್ರ, ಗಜಾನನ ಪ್ರೌಢಶಾಲೆ ಈಶ್ವರಮಂಗಲ, ಸರಕಾರಿ ಪ್ರೌಢಶಾಲೆ ಕಡಬ, ಕನ್ನಾಯ ಜ್ಯೋತಿ ಪ್ರೌಢಶಾಲೆ ಕಡಬ, ರಾಮಕುಂಜ ರಾಮಕುಂಜೇಶ್ವರ ಪ್ರೌಢ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ದಲ್ಲಿ ಪರೀಕ್ಷೆ ನಡೆದಿದೆ.
Related Articles
Advertisement
ಸುಳ್ಯ : ತಾಲೂಕಿನಲ್ಲಿ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿದ್ದು, ಒಟ್ಟು 39 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು, ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಗುರುವಾರ ನಡೆದ ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಸಂಸ್ಕೃತ) ಪರೀ ಕ್ಷೆಗೆ 2,036 ವಿದ್ಯಾರ್ಥಿ ಗಳಲ್ಲಿ 38 ಮಂದಿ ಗೈರು ಹಾಜರಾಗಿದ್ದು, 1998 ಮಂದಿ ಹಾಜರಾಗಿದ್ದಾರೆ. ಈ ಪೈಕಿ 108 ಮಂದಿ ಇಂಗ್ಲಿಷ್, 53 ಮಂದಿ ಸಂಸ್ಕೃತ ಹಾಗೂ 1,837 ಮಂದಿ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆದಿದ್ದಾರೆ.
6 ಪರೀಕ್ಷಾ ಕೇಂದ್ರಗಳುಸುಳ್ಯ ಸರಕಾರಿ ಪ.ಪೂ. ಕಾಲೇ ಜಿನಲ್ಲಿ 458ರಲ್ಲಿ 6 ಮಂದಿ, ಗಾಂಧಿಧಿನಗರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 272ರಲ್ಲಿ 6 ಮಂದಿ, ಸುಳ್ಯ ಶಾರದಾ ಮಹಿಳಾ ಶಿಕ್ಷಣ ಸಂಸ್ಥೆಯಲ್ಲಿ 277ರಲ್ಲಿ 5 ಮಂದಿ, ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ 282ರಲ್ಲಿ 6ಮಂದಿ, ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 311ರಲ್ಲಿ 3 ಮಂದಿ ಹಾಗೂ ಸುಬ್ರಹ್ಮಣ್ಯ ಪ.ಪೂ. ಕಾಲೇಜಿನಲ್ಲಿ 436ರಲ್ಲಿ 11 ಮಂದಿ ಗೈರು ಹಾಜರಾಗಿದ್ದಾರೆ. 9.45ರ ವರೆಗೆ ಅವಕಾಶ
ಪ್ರತಿದಿನ ಬೆಳಗ್ಗೆ 9.15ಕ್ಕೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. 9.30ಕ್ಕೆ ಪರೀಕ್ಷೆ ಆರಂಭಗೊಳ್ಳುತ್ತದೆ. 1 ನಿಮಿಷ ತಡವಾದರೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ 9.45ರ ವರೆಗೆ ಅವಕಾಶ ನೀಡಲಾಗಿದೆ. ಅನಂತರ ಕೇಂದ್ರಕ್ಕೆ ಬಂದವರಿಗೆ ಅವಕಾಶವಿಲ್ಲ. ಅರಂತೋಡು ಪರೀಕ್ಷಾ ಕೇಂದ್ರ ಈ ಬಾರಿ ರದ್ದುಗೊಂಡಿದೆ. ಸಂಪಾಜೆ, ಅರಂತೋಡು, ಮರ್ಕಂಜ ಇನ್ನಿತರ ಗ್ರಾಮಾಂತರ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರ ದೂರವಾಗಿದ್ದರಿಂದ ವಿದ್ಯಾ ರ್ಥಿಗಳು ಖಾಸಗಿ ವಾಹನಗಳ ಮೂಲಕ ಕೇಂದ್ರಕ್ಕೆ ಬಂದರು. ಎಲ್ಲೆಡೆ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆದಿದ್ದು, ಕೆಲವೊಂದು ಕೇಂದ್ರಗಳಲ್ಲಿ ಸಿ.ಸಿ. ಕೆಮರಾ ಅಳವಡಿ ಸಲಾಗಿತ್ತು.