Advertisement

ಮಸ್ಕತ್‌ನಲ್ಲಿ ಪುತ್ತಿಗೆಶ್ರೀಗಳಿಂದ ಗೀತಾಜಯಂತಿ

10:03 AM Dec 09, 2019 | sudhir |

ಉಡುಪಿ: ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಓಮನ್‌ನ ಮಸ್ಕತ್‌ನಲ್ಲಿ ರವಿವಾರ ಗೀತಾ ಜಯಂತಿಯನ್ನು ಆಚರಿಸಿದರು.

Advertisement

ಮಸ್ಕತ್‌ನಲ್ಲಿರುವ ಗುಜರಾತಿ ಕಿಂಜಿ ಸಮುದಾಯದ ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗೀತಾ ಜಯಂತಿಯೂ, ಏಕಾದಶಿಯೂ ಆದ ಕಾರಣ ಸುದರ್ಶನ ಹೋಮವನ್ನು ನಡೆಸಿದ ಬಳಿಕ ಸ್ವಾಮೀಜಿಯವರು ತಪ್ತಮುದ್ರಾಧಾರಣೆಯನ್ನು ಭಕ್ತರಿಗೆ ನೀಡಿದರು. ಸುದರ್ಶನ ಹೋಮವನ್ನು ವೈದಿಕರು ನಡೆಸಿದರು.

ಗೀತಾಚಾರ್ಯನಾದ ಶ್ರೀಕೃಷ್ಣ ಇದೇ ದಿನ ಅಮೃತಪ್ರಾಯವಾದ ಗೀತೆಯನ್ನು ಮನುಕುಲವನ್ನು ದೃಷ್ಟಿಯಲ್ಲಿರಿಸಿಕೊಂಡು ಅರ್ಜುನನ ಮೂಲಕ ಬೋಧಿಸಿದ. ಇದೊಂದು ಅದ್ಭುತವಾದ ಮನಃಶಾಸ್ತ್ರೀಯ ಗ್ರಂಥವೆಂದು ಜಗತ್ತಿನಾದ್ಯಂತ ವಿದ್ವಾಂಸರು ಕೊಂಡಾಡಿದ್ದಾರೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದಿನೇ ದಿನೇ ಹೆಚ್ಚುತ್ತಿರುವ ಸಾಮಾಜಿಕ, ಮಾನಸಿಕ ಸಮಸ್ಯೆಗಳನ್ನು ನೀಗಿಕೊಳ್ಳಬಹುದು ಎಂದು ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next