Advertisement
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಟಿಎಂಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಜೆ.ಡಿಎಸ್.ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಟ್ಟರಾಜು.
Related Articles
Advertisement
ಜೆಡಿಎಸ್.ಕಾರ್ಯಕರ್ತರು ಗ್ರಾಮಗಳಲ್ಲಿ ಯಾವುದೇ ಗಲಾಟೆಯಾಗದ ರೀತಿ ಉತ್ತಮ ರೀತಿಯಲ್ಲಿ ಶಾಂತಿಯುತ ವಾಗಿ ವರ್ತಿಸಿ.
ಮಂಡ್ಯದ ಕಲ್ಲಹಳ್ಳಿ ಗ್ರಾಮದಲ್ಲಿ ನಕಲಿ ಹೋರಾಟಗಾರ ಸೃಷ್ಟಿಯಾಗಿದ್ದು ಅವರ ಮೇಲೆ ನಾನು ಮಂತ್ರಿಯಾಗಿದ್ದಾಗಲೇ ಕಾನೂನು ರೀತಿಕ್ರಮ ಕೈಗೊಳ್ಳಲು ಮುಂದಾಗಿದೆ ಕೆಲ ನಾಯಕರು ಬುದ್ದಿ ಹೇಳುವುದಾಗಿ ತಿಳಿಸಿದ್ದರಿಂದ ನಾನು ಸುಮ್ಮನಾಗಿದ್ದೇನೆ ಎಂದರು.
ಜಕ್ಕನಹಳ್ಳಿ ಸರ್ಕಲ್ ನಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಲು ಹೊರಟ ನನ್ನ ಹಾಗೂ ಕಾರ್ಯಕರ್ತರ ವಿರುದ್ಧ ಅರೆಸ್ಟ್ ಮಾಡಿಸಲು ಮುಂದಾಗಿದ್ದ. ಅಲ್ಲಿ ಈ ಹಿಂದೆ ಗಣಪತಿ ಗುಡಿ ಇದ್ದ ಎಲ್ಲ ದಾಖಲಾತಿಗಳು ಇವೆ. ರವೀಂದ್ರ ಏನೇನೂ ಮಾಡಲು ಸಾಧ್ಯವಿಲ್ಲ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕನೂ ನಾನೇ ಮೊದಲ ಸಚಿವನೂ ನಾನೇ ಸಂಸದನಾಗಿಯೂ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಿದೇನೆ.
ಕ್ಷೇತ್ರ ಮತದಾರರ ನನಗೆ ಬಯಸಿದಕಿಂತಲ್ಲೂ ಹೆಚ್ಚು ಅಧಿಕಾರವನ್ನು ನೀಡಿದಾರೆ. ನನಗೆ ಅಧಿಕಾರ ದಾಹವಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಎಸ್.ಕೆ.ದೇವೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್, ಮುಖಂಡರಾದ ಕೆ.ಪುಟ್ಟೇಗೌಡ, ಎಂ.ಬಿ.ಶ್ರೀನಿವಾಸ್ ಇತರರಿದ್ದರು.