Advertisement

Ukraine issue ಚರ್ಚಿಸಲು ರಷ್ಯಾಕ್ಕೆ ಬರಲು ಮೋದಿಗೆ ಪುತಿನ್‌ ಆಹ್ವಾನ

11:40 PM Dec 28, 2023 | Team Udayavani |

ಮಾಸ್ಕೋ: ಉಕ್ರೇನ್‌ ವಿರುದ್ಧದ ಕಾರ್ಯಾಚರಣೆ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ವರ್ಷ ರಷ್ಯಾಕ್ಕೆ ಭೇಟಿ ನೀಡಲಿ ಎಂದು ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಆಹ್ವಾನ ನೀಡಿದ್ದಾರೆ. ಆ ದೇಶದ ಪ್ರವಾಸ ದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಜತೆಗೆ ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿಯವರಿಗೆ ವಿಧ್ಯುಕ್ತ ಆಮಂತ್ರಣ ನೀಡಿದ್ದಾರೆ.

Advertisement

“ನಮ್ಮ ಮಿತ್ರ ನರೇಂದ್ರ ಮೋದಿ ಅವರನ್ನು ರಷ್ಯಾದದಲ್ಲಿ ನೋಡಲು ಹರ್ಷಿಸುತ್ತೇನೆ. ಈ ವೇಳೆ ಅವರೊಂದಿಗೆ ಜಾಗತಿಕ ಬೆಳವಣಿಗೆ, ರಷ್ಯಾ-ಭಾರತ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಉಕ್ರೇನ್‌ನಲ್ಲಿನ ಪರಿಸ್ಥಿತಿ ಕುರಿತು ವಿವರವಾಗಿ ಮಾತನಾಡಬಹುದು’ ಎಂದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next