Advertisement

ಉಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಸಿದ್ದ, ಆದರೆ..: ಪುಟಿನ್ ಘೋಷಣೆ

09:37 AM Dec 23, 2022 | Team Udayavani |

ಮಾಸ್ಕೋ: ಉಕ್ರೇನ್ ವಿರುದ್ಧದ ಯುದ್ಧವನ್ನು ಆದಷ್ಟು ಬೇಗ ಅಂತ್ಯಗೊಳಿಸುವುದಾಗಿ ರಷ್ಯಾ ಹೇಳಿಕೊಂಡಿದೆ.

Advertisement

“ಈ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ನಾವು ಇದಕ್ಕಾಗಿ ಶ್ರಮಿಸುತ್ತಿದ್ದೇವೆ, ಪ್ರಯತ್ನಿಸುವುದನ್ನು ಮುಂದುವರಿಸುತ್ತೇವೆ. ಆದ್ದರಿಂದ ಎಲ್ಲವೂ ಆದಷ್ಟು ಬೇಗ ಅಂತ್ಯವಾಗುತ್ತದೆ ಎಂದು ನಾವು ಭಾವಿಸಿದ್ದೇವೆ” ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಫೆಬ್ರವರಿ 24 ರಂದು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದಿಂದ ಪ್ರಾರಂಭವಾದ ಯುದ್ಧದ ಅಂತ್ಯಕ್ಕೆ ಪುಟಿನ್ ಅವರು ಎಂದೂ ಸಿದ್ದವಿದ್ದಂತೆ ವರ್ತಿಸಿಲ್ಲ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಆರೋಪಿಸಿದ್ದರು.

” ಪುಟಿನ್ ಮಾಡುತ್ತಿರುವ ಪ್ರತಿಯೊಂದು ಕೆಲಸವೂ ಉಕ್ರೇನಿಯನ್ ಜನರ ಮೇಲೆ ಹಿಂಸಾಚಾರವನ್ನು ಮುಂದುವರಿಸಲು ಬಯಸುತ್ತಿರುವುದನ್ನು ಸೂಚಿಸುತ್ತದೆ” ಎಂದಿದ್ದರು. ಇದರ ಬಳಿಕ ಪುಟಿನ್ ಹೇಳಿಕೆ ಬಂದಿದೆ.

ಇದನ್ನೂ ಓದಿ:ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಆದ ಸಾನಿಯಾ ಮಿರ್ಜಾ

Advertisement

ಉಕ್ರೇನ್‌ ನಲ್ಲಿನ ಸಂಘರ್ಷದ ತ್ವರಿತ ಅಂತ್ಯವು ಅನಿವಾರ್ಯವಾಗಿ ರಾಜತಾಂತ್ರಿಕ ಪರಿಹಾರವನ್ನು ಒಳಗೊಂಡಿರುತ್ತದೆ. ಮಾತುಕತೆಗೆ ಮುಕ್ತವಾಗಿದೆ ಎಂದು ರಷ್ಯಾ ನಿರಂತರವಾಗಿ ಹೇಳಿದೆ ಎಂದು ಪುಟಿನ್ ಹೇಳಿದ್ದಾರೆ.

ರಷ್ಯಾವನ್ನು ದುರ್ಬಲಗೊಳಿಸಲು ಯುನೈಟೆಡ್ ಸ್ಟೇಟ್ಸ್ ಉಕ್ರೇನ್ ಅನ್ನು ಯುದ್ಧಭೂಮಿಯಾಗಿ ಬಳಸುತ್ತಿದೆ ಎಂದು ಕ್ರೆಮ್ಲಿನ್ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next