Advertisement

ಪುತ್ತೂರು: ಡಿವೈಡರ್ ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು: ಚಾಲಕ ಸಾವು

08:38 AM May 18, 2021 | Team Udayavani |

ಪುತ್ತೂರು: ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಪುತ್ತೂರಿನ ಕೆಮ್ಮಾಯಿಯಲ್ಲಿ ನಡೆದಿದೆ.

Advertisement

ಕಾರು‌ ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದು ಅವರನ್ನು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಸಹಾಯದೊಂದಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  ನಾವು ಯಶಸ್ಸು ಕಾಣಬೇಕಾದರೆ ಬಿಜೆಪಿಯಂತೆ ದೊಡ್ಡದಾಗಿ ಯೋಚಿಸಬೇಕು: ಹಿರಿಯ ಕಾಂಗ್ರೆಸ್ ನಾಯಕ

ಸಾವನ್ನಪ್ಪಿದವರನ್ನು ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

ಪುತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಇಸ್ರೇಲ್‌ ಸೇನೆಯ ಮುಂದುವರಿದ ವೈಮಾನಿಕ ದಾಳಿ: ಹಮಾಸ್‌ ರಹಸ್ಯ ಸುರಂಗ ಧ್ವಂಸ

 

Advertisement

Udayavani is now on Telegram. Click here to join our channel and stay updated with the latest news.

Next