Advertisement

ದರ್ಬೆಯಲ್ಲಿ ಮನರಂಜಿಸಿದ ‘ಪುತ್ತೂರ ಕಲೋತ್ಸವ -2018’

02:36 PM Apr 20, 2018 | Team Udayavani |

ದರ್ಬೆ: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಸಹಜ್‌ ರೈ ಸಾರಥ್ಯದಲ್ಲಿ ಆ್ಯಕ್ಸನ್‌ ಫ್ರೆಂಡ್ಸ್‌ ಪುತ್ತೂರು ಅರ್ಪಿಸುವ ಮ್ಯೂಸಿಕಲ್‌ ನೈಟ್‌ ‘ಪುತ್ತೂರ ಕಲೋತ್ಸವ-2018’ ಕಾರ್ಯಕ್ರಮವು ದರ್ಬೆಯಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ| ಮೋಹನ ಆಳ್ವ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸುಂದರ ಮನಸ್ಸು ಕಟ್ಟಿ ಅದರಲ್ಲಿ ಉತ್ತಮ ಸಂದೇಶ ಸಾರಲಾಗುತ್ತದೆ. ಯಾವ ದೇಶದಲ್ಲೂ ಇಂತಹ ಶಾಸ್ತ್ರೀಯವಾದ ಕಲೆಗಳಿರಲು ಸಾಧ್ಯವಿಲ್ಲ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯ ಜೊತೆಗೆ ಸುಂದರ ಮನಸ್ಸು ಕಟ್ಟಿ ಧರ್ಮ ಜಾಗೃತಿ ಮಾಡುವ ವಿದ್ಯಾಭ್ಯಾಸ ನೀಡುವ ಬಹುದೊಡ್ಡ ಕಾರ್ಯ ನಡೆಸಲಾಗುತ್ತಿದೆ. ಧರ್ಮದ ಜೊತೆಗೆ ಸಾಂಸ್ಕೃತಿಕ ಬದುಕನ್ನು ಸೂರ್ಯಚಂದ್ರರಿರುವಷ್ಟು ಕಾಲ ನಡೆಸಿಕೊಂಡು ಹೋಗಬೇಕು. ಎಲ್ಲರಲ್ಲೂ ಸೌಂದರ್ಯ ಪ್ರಜ್ಞೆಯಿದ್ದು ದೇಶದ ಬಹುದೊಡ್ಡ ಸಂಪತ್ತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕರುಣಾಕರ ರೈ ಮಾತನಾಡಿ, ಉತ್ತಮ ಸಂಘಟನೆಯ ಮೂಲಕ ಸಹಜ್‌ ರೈ ಅವರು ನಡೆಸುತ್ತಿರುವ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಲಿ ಎಂದು ಹಾರೈಸಿದರು.

ಡಾ| ಹರ್ಷಕುಮಾರ್‌ ರೈ ಮಾಡಾವು ಮಾತನಾಡಿ, ಇಂತಹ ಆಕರ್ಷಣೆಯ ಕಾರ್ಯ ಕ್ರಮಗಳು ಜಾತ್ರೆಯ ಸೌಂದರ್ಯವನ್ನು ಹೆಚ್ಚಿಸಿದೆ ಎಂದರು. ಪ್ರಮುಖರಾದ ದೀಪಕ್‌, ಪ್ರವೀಣ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟಕ ಸಹಜ್‌ ರೈ ಬಳೆಜ್ಜ ಸ್ವಾಗತಿಸಿ, ಸೌಜನ್ಯಾ ಹೆಗ್ಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next