Advertisement

ದಿನದ ಮಟ್ಟಿಗೆ ವೈದ್ಯರಾಗಿ: ಪ್ರಧಾನಿಗೆ ವೈದ್ಯರ ಮನವಿ

12:38 PM Dec 25, 2017 | Sharanya Alva |

ನವದೆಹಲಿ: ಒಂದು ದಿನದ ಮಟ್ಟಿಗೆ ವೈದ್ಯರಾಗಿ, ನಾವು ಎದುರಿಸುತ್ತಿರುವ ಸಂಕಷ್ಟವನ್ನು ಅನುಭವಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ರಾಜಸ್ಥಾನದ ಏಮ್ಸ್‌ ವೈದ್ಯರು ಪತ್ರ ಬರೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಮೂಲಸೌಕರ್ಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುವುದರಿಂದಾಗಿ ನಮ್ಮ ಮೇಲೆ ವಿಪರೀತ ಒತ್ತಡವಿದೆ. ಇದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು.

Advertisement

ನಿಮ್ಮಂತಹ ಸಕ್ರಿಯ ಪ್ರಧಾನಿಯನ್ನು ಪಡೆದಿರುವುದು ನಮಗೆ ಹೆಮ್ಮೆ. ನೀವು ಒಂದು ದಿನ ಏಪ್ರನ್‌, ಸ್ಟೆತಾಸ್ಕೋಪ್‌ ಧರಿಸಿ ವೈದ್ಯರಾಗಿ ಕೆಲಸ ಮಾಡಿದರೆ ಜನರ ಬಗ್ಗೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಇರುವ ಅಭಿಪ್ರಾಯವೂ ಬದಲಾಗಬಹುದು ಎಂದು ವೈದ್ಯರು ಮೊರೆಯಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next