Advertisement
ಮತ್ತೂಬ್ಬ ವಿದೇಶಿ ಪ್ರಜೆ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಬಂಧಿತರಿಂದ ನಕಲಿ ಪಾಸ್‌ಪೋರ್ಟ್ ಮತ್ತು ಒಂದು ಲಕ್ಷ ರೂ. ಮೌಲ್ಯದ 21.59 ಗ್ರಾಂ ತೂಕದ ಎಂಡಿಎಂಎ ಎಕ್ಸ್‌ಟಿಸಿ ಮಾತ್ರೆಗಳು ಮತ್ತು ಕ್ರಿಸ್ಟಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋರಮಂಗಲದ 8ನೇ ಬ್ಲಾಕ್‌ನ ಅಂಬೇಡ್ಕರ್ ಪಾರ್ಕ್ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವಾಗ ಆರೋಪಿಗಳನ್ನು ಮಾದಕ ವಸ್ತುಗಳ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಆದರೆ, ಖಚಿತವಾಗಿಲ್ಲ. ಈ ಮಧ್ಯೆ ಜೀವನ ನಿರ್ವಹಣೆಗಾಗಿ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸಿ ನಗರದ ಕಾಲೇಜು ವಿದ್ಯಾರ್ಥಿಗಳು, ಸಾಪ್ಟ್ವೇರ್ ಇಂಜಿನಿಯರ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮೂರನೇ ಆರೋಪಿ ಆದಿತ್ಯ ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಂಧಿತ ಇಬ್ಬರು ವಿದೇಶಿ ಪ್ರಜೆಗಳಿಂದ ಎಂಡಿಎಂ ಎಕ್ಸಿಟೆಸಿ ಮಾತ್ರೆಗಳು ಹಾಗೂ ಕ್ರಿಸ್ಟೆಲ್‌ಗಳನ್ನು ಖರೀದಿಸಿ ತನಗೆ ಪರಿಚಯವಿರುವ ವಿದ್ಯಾರ್ಥಿಗಳು ಹಾಗೂ ಇತರರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಶೂ ಮತ್ತು ಸಾಕ್ಸ್‌ಗಳಲ್ಲಿ ಸಾಗಾಟ: ಇಬ್ಬರು ವಿದೇಶಿ ಪ್ರಜೆಗಳು ಪೊಲೀಸರ ಕಣ್ಣು ತಪ್ಪಿಸಲು ತಾವು ಧರಿಸುತ್ತಿದ್ದ ಶೂ ಮತ್ತು ಸಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಆರೋಪಿ ಆದಿತ್ಯನಿಗೂ ಸಹ ಇದೇ ಮಾರ್ಗದ ಮೂಲಕ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು. ಬಳಿಕ ಈತ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಪ್ರತಿ ಗ್ರಾಂ 2 ರಿಂದ 3 ಸಾವಿರ ರೂ.ಗೆ ಬೇರೆಡೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.