ಮಸ್ಕಿ: ಮಸ್ಕಿಯಲ್ಲಿ ಇನ್ನು ದ್ವೇಷ ರಾಜಕಾರಣ ಜೀವಂತವಿದೆ. ಮತದಾರರು ದ್ವೇಷ, ದಬ್ಟಾಳಿಕೆ ರಾಜಕಾರಣಕ್ಕೆ ಅಂತ್ಯ ಹಾಡಬೇಕಾದರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ನೀಡಿ ಎಂದು ಶಾಸಕ ಅಮರೇಗೌಡ ಬಯ್ನಾಪುರ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ 2,12,15 ಸೇರಿ ನಾನಾ ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಮಾತನಾಡಿದರು.
ಬಿಜೆಪಿ ಸರಕಾರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ. ಬಸನಗೌಡ ತುರುವಿಹಾಳ ಶಾಸಕರಾದ ಬಳಿಕ ಸರಿಯಾದ ಅನುದಾನವೇ ಮಸ್ಕಿ ಕ್ಷೇತ್ರಕ್ಕೆ ಬಿಡುಗಡೆಯಾಗುತ್ತಿಲ್ಲ. ಮಸ್ಕಿ ಉಪಚುನಾವಣೆ ರೀತಿಯಲ್ಲೇ ಪುರಸಭೆ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಬೇಕು. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಮತದಾರರು ಚುನಾವಣೆಯಲ್ಲಿಯೇ ಪಾಠ ಕಲಿಸಬೇಕು ಎಂದರು.
ಶಾಸಕ ಆರ್. ಬಸನಗೌಡ ತುರ್ವಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮುಖಂಡರಾದ ನಿರುಪಾದೆಪ್ಪ ವಕೀಲರು, ಎಚ್.ಬಿ. ಮುರಾರಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಹೂವಿನಭಾವಿ, ಶ್ರೀಶೈಲಪ್ಪ ಬ್ಯಾಳಿ, ವೆಂಕಟರೆಡ್ಡಿ ಹಾಲಾಪುರ, ಹನುಮಂತಪ್ಪ ಮುದ್ದಾಪೂರು, ಸಿದ್ದನಗೌಡ ಮಾಟೂರು, ಕೃಷ್ಣಾ ಡಿ.ಚಿಗರಿ, ಮಲ್ಲಯ್ಯ ಬಳ್ಳಾ, ಅಬ್ದುಲ್ ಗನಿ, ಬಸನಗೌಡ ಮಾರಲದಿನ್ನಿ, ಹನುಮಂತಪ್ಪ ವೆಂಕಟಪೂರ, ಚಾಂದ್ ಸ್ಮೇಡ್ಮಿ, ಆನಂದ, ಪಂಪನಗೌಡ ಗುಡದೂರು, ಮಲ್ಲಯ್ಯ ಗುಡಸಲಿ, ನೀಸ್ಸಾರ್ ಅಹ್ಮದ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.