Advertisement

“ಸುವರ್ಣರು ನಿಸ್ವಾರ್ಥ ಮನೋಭಾವದ ಧೀಮಂತ ವ್ಯಕ್ತಿ’

09:46 PM Nov 11, 2020 | Suhan S |

ಮುಂಬಯಿ, ನ. 10: ಜಯ ಸುವರ್ಣರು ಬಿಲ್ಲವ ಸಮುದಾಯಕ್ಕೆ ನಾರಾಯಣಗುರುಗಳ ಅನುಗ್ರಹ, ಆಶೀರ್ವಾದದಿಂದ ಒದಗಿದ್ದಾರೆ. ಸಂಘಟನ ಶಕ್ತಿಯಿಂದ ಅಸೋಸಿಯೇಶನಿನ ಎಲ್ಲ ಸದಸ್ಯರನ್ನು, ಸಮಾಜ ಬಾಂಧವರನ್ನು ಒಗ್ಗೂಡಿಸಿ ಬಿಲ್ಲವ ಭವನ ನಿರ್ಮಾಣ ಹಾಗೂ ಸಂಘಟನೆಯನ್ನು ಬಲಪಡಿಸಲು 23 ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಿದ ಕೀರ್ತಿ ಸುವರ್ಣರಿಗೆ ಸಲ್ಲುತ್ತದೆ. ಭಾರತ್‌ ಬ್ಯಾಂಕ್‌ನ ಆಡಳಿತ ಸಮಿತಿಗೆ ಸೇರಿ ಅತೀ ಅಲ್ಪ ಸಮಯದಲ್ಲಿ 5 ಶಾಖೆಗಳನ್ನು ಹೊಂದಿದ್ದ ಬ್ಯಾಂಕನ್ನು 102 ಶಾಖೆಗಳಿಗೆ ವಿಸ್ತರಿಸಿ, ಸಹಕಾರಿ ಬ್ಯಾಂಕುಗಳಲ್ಲಿ 5ನೇ ಸ್ಥಾನಕ್ಕೆ ತಲುಪಿಸುವಲ್ಲಿ ಶ್ರಮಿಸಿದರು. ತನ್ನ ಜೀವಿತಾವಧಿ

Advertisement

ಯಲ್ಲಿ ಹಲವಾರು ಬಿರುದು-ಸಮ್ಮಾನಗಳನ್ನು ಮುಡಿಗೇರಿಸಿದ್ದರಲ್ಲದೆ ಅವರಿಗೆ ಲಭಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರ ಸಮರ್ಥ ಸಮಾಜ ಸೇವೆಗೆ ಸಾಕ್ಷಿ. ನಿಸ್ವಾರ್ಥ ಮನೋಭಾವದ ಸುವರ್ಣರು ತಮ್ಮ ಸಮಾಜ ಸೇವೆಯನ್ನು ಜಾತಿ – ಧರ್ಮ ಭೇದವಿಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಮೀಸಲಾಗಿಟ್ಟ ಓರ್ವ ಧೀಮಂತ ವ್ಯಕ್ತಿ ಎಂದು ಭಾರತ್‌ ಬ್ಯಾಂಕ್‌ನ ನಿರ್ದೇಶಕ ರಾಜಾ ವಿ. ಸಾಲ್ಯಾನ್‌ ಹೇಳಿದರು.

ನ. 1ರಂದು ಬಿಲ್ಲವರ ಅಸೋಸಿಯೇಶನ್‌ ಮುಲುಂಡ್‌ ಸ್ಥಳೀಯ ಕಚೇರಿ ವತಿ ಯಿಂದ ಆಯೋಜಿಸಲ್ಪಟ್ಟ ಬಿಲ್ಲವರ ಅಸೋಸಿ ಯೇಶನ್‌ನ ಮಾಜಿ ಅಧ್ಯಕ್ಷ, ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ, ಭಾರತ್‌ ಬ್ಯಾಂಕ್‌ನ ನಿಕಟಪೂರ್ವ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ, ಜಯ ಸುವರ್ಣ ಹಾಕಿಕೊಂಡಿರುವ ಯೋಜನೆ ಗಳನ್ನು ನಾವೆಲ್ಲ ಸಂಘಟಿತರಾಗಿ ಕಾರ್ಯಗತ ಗೊಳಿಸೋಣ ಎಂದರು.

ಭಾರತ್‌ ಬ್ಯಾಂಕ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಸುವರ್ಣರು ಕೆಲವೇ ದಿನಗಳ ಹಿಂದೆ ಬ್ಯಾಂಕ್‌ನ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿದ್ದನ್ನು ಸ್ಮರಿಸಿ, ಅವರ ಸರ್ವ ಕಾರ್ಯವೈಖರಿ ಬಗ್ಗೆ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ವಿವರಿಸಿ, ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು. ಉದ್ಯಮಿ ಕೆ. ಪಿ. ಸಂಜೀವ ಮಾತನಾಡಿ, ಜಯ ಸುವರ್ಣರು ಬಿಲ್ಲವರನ್ನು ಸಮಾಜದಲ್ಲಿ ಗುರುತಿಸುವಲ್ಲಿ ಶ್ರಮಿಸಿದ ಮಹಾನ್‌ ಸಾಧಕರು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪುರುಷೋತ್ತಮ ಎಸ್‌. ಕೋಟ್ಯಾನ್‌ ಮಾತನಾಡಿ, ಉದ್ಯೋಗ ಅರಸಿ ಮುಂಬಯಿಗೆ ಬಂದ ಬಡ ಮಕ್ಕಳಿಗೆ ಸುವರ್ಣರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕೊಡಿಸಿ ಅವರ ಬಾಳು ಬೆಳಗಿಸಿದ ಪುಣ್ಯಾತ್ಮರು. ಅವರ ಸಮಯಪ್ರಜ್ಞೆ ಹಾಗೂ ನಿರ್ಣಯ ಶಕ್ತಿ ಶ್ಲಾಘನೀಯ. ಎಲ್ಲ ಸಮಾಜಗಳ ಜನರೊಂದಿಗೆ ಸಮಾನ ಮನಸ್ಕರಾಗಿ ಬೆರೆಯುತ್ತಿದ್ದ ಸುವರ್ಣರು ಸರ್ವ ಸಮಾಜದ ಶಕ್ತಿ. ನಮ್ಮಿಂದ ದೂರವಾದರೂ ಅವರ ಆದರ್ಶಗಳನ್ನು ನಾವು ನೆನಪಿಡಬೇಕಾಗಿದೆ ಎಂದರು.

Advertisement

ಭಾರತ್‌ ಬ್ಯಾಂಕ್‌ನ ಜಂಟಿ ಆಡಳಿತ ನಿರ್ದೇಶಕ ದಿನೇಶ್‌ ಸಾಲ್ಯಾನ್‌, ನಿರ್ದೇಶಕ ಜಯ ಎ. ಕೋಟ್ಯಾನ್‌, ಸ್ಥಳೀಯ ಕಚೇರಿಯ ಮಾಜಿ ಕಾರ್ಯದರ್ಶಿ ವಿನಯ ಪೂಜಾರಿ ಅವರು ಸುವರ್ಣರ ಬಗ್ಗೆ ಮಾತನಾಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಸ್ಥಳೀಯ ಕಚೇರಿಯ ಕೋಶಾಧಿಕಾರಿ ಶಂಕರ ಜೆ. ಪೂಜಾರಿ. ಉಪಕಾರ್ಯಾಧ್ಯಕ್ಷ ಶಂಕರ ಅಮೀನ್‌, ಭಾರತ್‌ ಬ್ಯಾಂಕ್‌ನ ಅಧಿಕಾರಿಗಳಾದ ನಿತ್ಯಾನಂದ ಕಿರೋಡಿಯನ್‌, ಪ್ರಭಾಕರ ಪೂಜಾರಿ, ರತ್ನಾಕರ ಸಾಲ್ಯಾನ್‌, ಪ್ರಸ್ತುತ ಹಾಗೂ ನಿವೃತ್ತ ಬ್ಯಾಂಕ್‌ ಉದ್ಯೋಗಿಗಳು, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮುಲುಂಡು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಮಿತಿಗಳ ಸದಸ್ಯರು, ಸದಸ್ಯೆಯರು, ಹಿತೈಷಿಗಳು ಜಯ ಸುವರ್ಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಪುಷ್ಪನಮನ  :  ಆರಂಭದಲ್ಲಿ ಸಮಿತಿಯ ಪದಾಧಿಕಾರಿಗಳು ಸುವರ್ಣರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ, ಪುಷ್ಪನಮನ ಸಲ್ಲಿಸಿದರು. ಸಮಿತಿಯ ಗೌರವ ಕಾರ್ಯದರ್ಶಿ ಸತೀಶ್‌ ಪೂಜಾರಿ ಜಯ ಸುವರ್ಣರ ಸಾಧನೆಗಳ ಬಗ್ಗೆ ತಿಳಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಗಲಿದ ಆತ್ಮದ ಚಿರಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next